ಕಾಸರಗೋಡು: ಅಂತರಾಷ್ಟ್ರೀಯ ಮೂಲನಿವಾಸಿಗಳ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಶಾಸಕ ಸಿ.ಎಚ್.ಕುಞಂಬು ಉದ್ಘಾಟಿಸಿದರು.
ಕಾಸರಗೋಡು ಬಾಲಕಿಯರ ಮಾದರಿ ವಸತಿ ಶಾಲೆಯಲ್ಲಿ ಗಿರಿಜನ ಅಭಿವೃದ್ಧಿ ಕಛೇರಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಲ್ಯಾಂಡ್ ಬ್ಯಾಂಕ್ ಯೋಜನೆಯಡಿಯಲ್ಲಿ ಉನ್ನತ ಸ್ಥಾನಕ್ಕೆ ಏರಿದ ಹಳೇ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರಮಾಣ ಪತ್ರ ವಿತರಿಸಲಾಯಿತು. ಲ್ಯಾಂಡ್ ಬ್ಯಾಂಕ್ ಯೋಜನೆಯನ್ವಯ ಮಂಜೂರಾದ ಜಾಗದ ಹಕ್ಕುಪತ್ರಗಳ ವಿತರಣೆ ನಡೆಯಿತು. ಸಿಂತೆಟಿಕ್ ಟ್ರ್ಯಾಕಿನ ಉದ್ಘಾಟನೆ ಮತ್ತು 10ನೇ ತರಗತಿ ವಿಜೇತರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಿರಿಜನ ಅಭಿವೃದ್ಧಿ ಅಧಿಕಾರಿ ಎಂ.ಮಲ್ಲಿಕಾ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಪ್ರಭಾರಿ ಪ್ರಾಚಾರ್ಯ ಎಸ್.ಎಸ್.ಅಜೀಶ, ರಾಜ್ಯ ಪರಿಶಿಷ್ಟ ಪಂಗಡ ಸಲಹಾ ಸಮಿತಿ ಸದಸ್ಯ ಗೋಪಿ ಕುದಿರಕಲ್, ಡಾ. ಹರಿತಾ ರಾಮಕೃಷ್ಣನ್, ಡಾ. ಪ್ರತಿಭಾ ಕರುಣಾಕರನ್ ಉಪಸ್ಥಿತರಿದ್ದರು. ಸಹಾಯಕ ಟಿಡಿಒಕೆ.ವಿ.ರಾಘವನ್ ಸ್ವಾಗತಿಸಿದರು. ಮಾದರಿ ವಸತಿ ಶಾಲೆಯ ಹಿರಿಯ ಅಧೀಕ್ಷಕ ಕೆ.ಎಂ.ಪ್ರಸನ್ನ ವಂದಿಸಿದರು.
ಮೂಲನಿವಾಸಿಗಳ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮ
0
ಆಗಸ್ಟ್ 16, 2022
Tags