ಕಾಸರಗೋಡು: ವಿವಿಧ ಬೇಡಿಕೆ ಮುಂದಿರಿಸಿಕೊಂಡು ಭಾರತೀಯ ಅಂಚೆ ನೌಕರರ ಫೆಡರೇಶನ್ (ಬಿಪಿಇಎಫ್) ಆಶ್ರಯದಲ್ಲಿ ಅಂಚೆ ಇಲಾಖೆ ಕಾಸರಗೋಡು ವಿಭಾಗೀಯ ಕಚೇರಿ ಎದುರು ಧರಣಿ ನಡೆಯಿತು. ಬಿಎಂಎಸ್ ಜಿಲ್ಲಾಧ್ಯಕ್ಷ ವಿ. ವಿ. ಬಾಲಕೃಷ್ಣ ಉದ್ಘಾಟಿಸಿದರು.
ವಿಭಾಗದ ಅಧ್ಯಕ್ಷ ಪಿ. ಗಂಗಾಧರನ್ ಅಧ್ಯಕ್ಷತೆ ವಹಿಸಿದ್ದರು.
12,24,36 ವರ್ಷಗಳ ಸೇವೆ ನಂತರ ಗ್ರಾಮೀಣ ಡಾಕ್ ಸೇವಾ(ಜಿ.ಡಿ.ಎಸ್)ಸಿಬ್ಬಂದಿಗೆ ಎರಡು ಮುಂಗಡ ಏರಿಕೆಯೊಂದಿಗೆ ಗ್ರೇಡಿಂಗ್ ನೀಡಬೇಕು, ಕಾಸರಗೋಡಿನ ವಿಂಗಡಣಾ ವಿಭಾಗವನ್ನು ಕಣ್ಣೂರಿನ ಆರ್‍ಎಂಎಸ್‍ನೊಂದಿಗೆ ವಿಲೀನಗೊಳಿಸುವುದನ್ನು ತಡೆಗಟ್ಟಬೇಕು, ಹಳೆಯ ಶಾಸನಬದ್ಧ ಪಿಂಚಣಿ ವ್ಯವಸ್ಥೆಯನ್ನು ಮರುಸ್ಥಾಪಿಸಬೇಕು ಮುಂತಾದ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಯಿತು. ಬಿಪಿಇಎಫ್ ಜಿಲ್ಲಾ ಸಮಿತಿ ಸದಸ್ಯ ಕೋಟೋಟಿ ನಾರಾಯಣನ್, ಎನ್‍ಜಿಒ ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ರಾಜನ್, ಕೆಎಸ್‍ಟಿ ನೌಕರರ ಸಂಘದ ಘಟಕದ ಅಧ್ಯಕ್ಷ ಸಿ. ಎಚ್. ಹರೀಶ್ ಕುಮಾರ್, ಮುಖಂಡರಾದ ಪಿ. ದೇವದಾಸ್, ಕೆ. ಮನೋಜ್, ಟಿ. ಭಾಸ್ಕರನ್, ಕೆ. ಮೋಹನನ್ ಉಪಸ್ಥಿತರಿದ್ದರು. ಬಿಪಿಇಎಫ್ ವಿಭಾಗದ ಸಂಚಾಲಕ ಬಿ. ವಾಸುದೇವ ಸ್ವಾಗತಿಸಿದರು.
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಭಾರತೀಯ ಅಂಚೆ ನೌಕರರ ಫೆಡರೇಶನ್ ವತಿಯಿಂದ ಧರಣಿ
0
ಆಗಸ್ಟ್ 04, 2022
Tags