ಕಾಸರಗೋಡು: ಜಿಲ್ಲೆಯ 41 ಪ್ರತಿಭಾ ಕೇಂದ್ರಗಳ ಚಟುವಟಿಕೆಗಳನ್ನು ಮುನ್ನಡೆಸುವ ಶಿಕ್ಷಣ ಸ್ವಯಂಸೇವಕರಿಗೆ ಸಮಗ್ರ ಶಿಕ್ಷಾದ ನೇತೃತ್ವದಲ್ಲಿ ಒಂದು ದಿನದ ತರಬೇತಿ ಆಯೀಜಿಸಲಾಗಿತ್ತು. ಸಮಾಜದಲ್ಲಿ ಅಂಚಿನಲ್ಲಿರುವ ಗುಡ್ಡಗಾಡು, ಕರಾವಳಿ ಮತ್ತು ಇತರ ಹಿಂದುಳಿದ ಪ್ರದೇಶಗಳ ಮಕ್ಕಳಿಗೆ ಹೆಚ್ಚುವರಿ ಬೆಂಬಲ ನೀಡಲು ಮತ್ತು ಪ್ರತಿಭೆಯನ್ನು ಪೋಷಿಸಲು ಸ್ವಯಂಸೇವಕರಿಗೆ ತರಬೇತಿ ನೀಡಲಾಯಿತು. ಸಮಗ್ರ ಶಿಕ್ಷಾ ಕೇರಳ ಜಿಲ್ಲಾ ಕಾರ್ಯಕ್ರಮಾಧಿಕಾರಿ ಕೆ.ಪಿ.ರಂಜಿತ್ ಉದ್ಘಾಟಿಸಿದರು. ಹೊಸದುರ್ಗ ಬಿಆರ್‍ಸಿ ತರಬೇತುದಾರ ಸುಬ್ರಮಣಿಯನ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾ ಕೇಂದ್ರಗಳಲ್ಲಿನ ಉತ್ಕøಷ್ಟತೆಯ ಪ್ರಸ್ತುತಿ, ಮುಂಬರುವ ದಿನಗಳಲ್ಲಿ ನಡೆಯಲಿರುವ ಪಠ್ಯಕ್ರಮ ಮತ್ತು ಸಹಪಠ್ಯ ಚಟುವಟಿಕೆಗಳ ಯೋಜನೆ ಮತ್ತು ಪಠ್ಯಕ್ರಮದ ವಿಧಾನದ ಬಗ್ಗೆ ತರಗತಿಯನ್ನು ನೀಡಲಾಯಿತು. ತರಬೇತುದಾರ ಪಿ.ರಾಜಗೋಪಾಲನ್ ತರಗತಿ ನಡೆಸಿದರು. ಸಿಆರ್ ಸಿ ಸಂಯೋಜಕ ಕೆ.ನಿಶಾ, ಪಿ.ಶ್ರೀಜಾ, ಎಂ.ಸುನಿತಾಮೋಳ್ ಕಾರ್ಯಾಗಾರ ನಡೆಸಿಕೊಟ್ಟರು.
ಶಿಕ್ಷಣ ಸ್ವಯಂಸೇವಕರಿಗೆ ತರಬೇತಿ
0
ಆಗಸ್ಟ್ 08, 2022