HEALTH TIPS

ಹೈದರಾಬಾದ್‌ನ ಸಂಶೋಧಕರಿಂದ ತ್ರಿ-ಡಿ ಮುದ್ರಿತ ಕೃತಕ ಕಾರ್ನಿಯಾ ಅಭಿವೃದ್ಧಿ

 

           ಹೈದರಾಬಾದ್‌: ನಗರದ ವಿಜ್ಞಾನಿಗಳು ಹಾಗೂ ಸಂಶೋಧಕರು ತ್ರಿ-ಡಿ ಮುದ್ರಿತ ಕೃತಕ ಕಾರ್ನಿಯಾ ಅಭಿವೃದ್ಧಿಪಡಿಸಿ ಅದನ್ನು ಮೊಲವೊಂದರ ಕಣ್ಣಿಗೆ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಮಟ್ಟಿಗೆ ಇದು ಮೊದಲ ಪ್ರಯೋಗವಾಗಿದೆ.

               'ಎಲ್‌.ವಿ.ಪ್ರಸಾದ್‌ ನೇತ್ರ ಸಂಸ್ಥೆ (ಎಲ್‌ವಿಪಿಇಐ), ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ-ಹೈದರಾಬಾದ್‌ (ಐಐಟಿಎಚ್‌) ಹಾಗೂ ಸೆಂಟರ್‌ ಫಾರ್‌ ಸೆಲ್ಯೂಲರ್‌ ಆಯಂಡ್‌ ಮೊಲಿಕ್ಯುಲರ್‌ ಬಯಾಲಜಿ (ಸಿಸಿಎಂಬಿ) ಸಂಸ್ಥೆಯ ಸಂಶೋಧಕರು ವ್ಯಕ್ತಿಯೊಬ್ಬರು ದಾನ ಮಾಡಿದ್ದ ಕಾರ್ನಿಯಲ್‌ ಅಂಗಾಂಶದಿಂದ ಇದನ್ನು ಅಭಿವೃದ್ಧಿಪಡಿಸಿದ್ದಾರೆ' ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


             'ಇದು ಸಂಪೂರ್ಣವಾಗಿ ನೈಸರ್ಗಿಕ ಉತ್ಪನ್ನವಾಗಿದೆ. ಇದರಲ್ಲಿ ಯಾವುದೇ ಬಗೆಯ ಸಿಂಥೆಟಿಕ್‌ ಅಂಶಗಳನ್ನು ಸೇರ್ಪಡೆ ಮಾಡಿಲ್ಲ. ಇದು ಅತ್ಯಂತ ಸುರಕ್ಷಿತವಾಗಿದ್ದು, ರೋಗಿಗಳ ಬಳಕೆಗೆ ಮುಕ್ತವಾಗಿದೆ' ಎಂದೂ ಹೇಳಲಾಗಿದೆ.

               'ಈ ಕಾರ್ನಿಯಾ ತಯಾರಿಕೆಗಾಗಿ 'ಬಯೊ ಇಂಕ್‌' ಬಳಸಲಾಗಿದೆ. ಯುದ್ಧದ ಸಂದರ್ಭಗಳಲ್ಲಿ ಯೋಧರ ಕಣ್ಣುಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅವರ ದೃಷ್ಟಿಗೆ ಹಾನಿಯಾಗದಂತೆ ರಕ್ಷಿಸಲು ಹಾಗೂ ಕಣ್ಣಿಗೆ ಯಾವುದೇ ಬಗೆಯ ಸೋಂಕು ತಗುಲದಂತೆ ತಡೆಯಲು ಬಯೊ ಇಂಕ್‌ ಪ್ರಯೋಜನಕಾರಿ. ಕುಗ್ರಾಮದ ಜನರು ಕಣ್ಣಿನ ಆರೈಕೆ ಸೌಕರ್ಯದಿಂದ ವಂಚಿತರಾಗಿರುತ್ತಾರೆ. ಅಂತಹ ಸ್ಥಳಗಳಲ್ಲಿ 'ಬಯೊ ಇಂಕ್‌' ಬಳಸಬಹುದು' ಎಂದು ಕಾರ್ನಿಯಾ ಅಭಿವೃದ್ಧಿಪಡಿಸಿರುವ ಸಂಶೋಧಕರ ತಂಡದ ಸದಸ್ಯರಾದ ಡಾ.ಸಯಾನ್ ಬಸು ಹಾಗೂ ಡಾ.ವಿವೇಕ್‌ ಸಿಂಗ್‌ ತಿಳಿಸಿದ್ದಾರೆ.

                'ಕಾರ್ನಿಯಲ್‌ ಸ್ಕೇರಿಂಗ್‌' ಮತ್ತು 'ಕೆರಾಟೊಕೊನಸ್‌' ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳನ್ನೂ ಗಮನದಲ್ಲಿಟ್ಟುಕೊಂಡು ತ್ರಿ-ಡಿ ಮುದ್ರಿತ ಕೃತಕ ಕಾರ್ನಿಯಾವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ್ದೇವೆ' ಎಂದೂ ಹೇಳಿದ್ದಾರೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries