ತಿರುವನಂತಪುರ: ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆಯ ಅಂಗವಾಗಿ ಆಗಸ್ಟ್ 13 ರಿಂದ(ಇಂದಿನಿಂದ) 15 ರವರೆಗೆ ಮಿಲ್ಮಾದ ಹಾಲಿನ ಪ್ಯಾಕೆಟ್ ಗಳು ತ್ರಿವರ್ಣ ಧ್ವಜದ ಚಿತ್ರ ಒಳಗೊಂಡಿರುತ್ತವೆ.
ಹ್ಯಾಪಿ ಇಂಡಿಪೆಂಡೆನ್ಸ್ ಡೇ ಮುಖಪುಟದ ಚಿತ್ರ ಈಗಾಗಲೇ ಬಿಡುಗಡೆಯಾಗಿದೆ. ತ್ರಿವರ್ಣ ಧ್ವಜವನ್ನು ಮಿಲ್ಮಾದ 525 ಮಿಲಿ ಹೋಮೋಜೆನೈಸ್ಡ್ ಟೋನ್ಡ್ ಹಾಲಿನ ಪ್ಯಾಕೆಟ್ ನಲ್ಲಿ ಮುದ್ರಿಸಲಾಗಿದೆ.
ಮಿಲ್ಮಾ ಚಿಹ್ನೆಯ ಮೇಲೆ ಸ್ವಾತಂತ್ರ್ಯ ದಿನದ ಶುಭಾಶಯಗಳು, ಕೆಂಪುಕೋಟೆಯ ಚಿತ್ರವೂ ಇರಲಿದೆ. ಸ್ವಾತಂತ್ರ್ಯ ಸಂದೇಶವನ್ನು ನೀಡುವ ಪ್ರಧಾನ ಮಂತ್ರಿಯ ಗೆರೆ ಚಿತ್ರ, ಮತ್ತು ಇನ್ನೊಂದು ಬದಿಯಲ್ಲಿ ಹಸುವಿನ ಜೊತೆ ತ್ರಿವರ್ಣ ಧ್ವಜವನ್ನು ಹಿಡಿದಿರುವ ಡೈರಿ ರೈತನ ಚಿತ್ರ ಇದೆ. ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಮೂಲಕ ಇತಿಹಾಸ ನಿರ್ಮಿಸಲು ಸಿದ್ಧತೆ ನಡೆಸಿವೆ. ಮಿಲ್ಮಾ ಈ ಸಂಭ್ರಮಾಚರಣೆಯ ಭಾಗವಾಗಲು ಸಿದ್ಧವಾಗಿದೆ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಿಲ್ಮಾ ಇಂದಿನಿಂದ ತ್ರಿವರ್ಣ ಕವರ್‍ಗಳನ್ನು ಬಿಡುಗಡೆ ಮಾಡಿದೆ.
ಸ್ವಾತಂತ್ರ್ಯ ದಿನಾಚರಣೆ: ಇಂದಿನಿಂದ ತ್ರಿವರ್ಣ ಧ್ವಜ ಚಿತ್ರ ಹೊಂದಿರುವ ಕವರ್‍ಗಳಲ್ಲಿ ಮಿಲ್ಮಾ ಹಾಲು
0
ಆಗಸ್ಟ್ 13, 2022
Tags