ಕಾಸರಗೋಡು: ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಕಾಸರಗೋಡು ತಾಲೂಕು ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ವಿಶೇಷ ಸಭೆ ನಡೆಯಿತು. ಕಾಸರಗೋಡು ಮತ್ತು ಉದುಮ ವಿಧಾನಸಭಾ ಕ್ಷೇತ್ರದ ಮತದಾರರ ಆಧಾರ್ ಸಂಖ್ಯೆಯನ್ನು ಮತದಾರರ ಪಟ್ಟಿಯೊಂದಿಗೆ ಜೋಡಿಸಲು ನಿರ್ಧರಿಸಲಾಗಿದೆ. ಆಧಾರ್ ಲಿಂಕ್ ಮಾಡುವುದರಿಂದ ಮತದಾರರ ಪಟ್ಟಿಯಲ್ಲಿ ಅನಧಿಕೃತ ಸೇರ್ಪಡೆ, ನಕಲು ತಡೆಯುವುದು, ನಕಲಿ ಮತಗಳ ತಡೆಗಟ್ಟುವಿಕೆ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕಗೊಳಿಸಬಹುದಾಗಿದೆ. ಈ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಈ ಯಜ್ಞದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಆಧಾರ್ ಲಿಂಕ್ ಮಾಡಿಸಿಕೊಳ್ಳಬೇಕು ಎಂದು ಚುನಾವಣಾ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ನವೀನ್ ಬಾಬು ಮನವಿ ಮಾಡಿದರು.
ಕಲೆಕ್ಟರೇಟ್‍ನ ಮುಖ್ಯ ದ್ವಾರ ಮತ್ತು ಚುನಾವಣಾ ವಿಭಾಗದಲ್ಲಿ ಜಿಲ್ಲೆಮಟ್ಟ ಮತ್ತು ತಾಲೂಕು ಕಚೇರಿಗಳಲ್ಲಿ ಆಧಾರ್ ನೋಂದಾವಣಾ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆಧಾರ್ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿಯೊಂದಿಗೆ ಮತದಾರರ ಅನುಕೂಲ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಮತದಾರರ ಪಟ್ಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬಹುದು.
ಭಾರತೀಯ ಚುನಾವಣಾ ಆಯೋಗದ ವೆಬ್ ಪೆÇೀರ್ಟಲ್ ಮತ್ತು ಮತದಾರರ ಸಹಾಯವಾಣಿ ಮೊಬೈಲ್ ಅಪ್ಲಿಕೇಶನ್, ಆನ್‍ಲೈನ್, ಬೂತ್ ಮಟ್ಟದ ಅಧಿಕಾರಿಯ ಮೂಲಕ ಮತದಾರರ ಪಟ್ಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಸಹ ಲಿಂಕ್ ಮಾಡಬಹುದಾಗಿದೆ.
ಪ್ರಭಾರ ತಹಸೀಲ್ದಾರ್ ಪಿ.ಪ್ರಮೋದ್, ಉಪ ತಹಸೀಲ್ದಾರ್ ಟಿ.ಜಯಕುಮಾರ್, ವಿವಿಧ ರಾಜಕೀಯ ಪಕ್ಷಗಳ ¥ಕೆ.À್ರತಿನಿಧಿಗಳಾದ ಮಧು ಮುತ್ತಿಯಕಲ್, ಟಿ.ಎಂ.ಎ.ಕರೀಂ, ಕೆ.ವಿ.ಭಕ್ತವತ್ಸಲನ್, ಕೆ.ಖಾಲೀದ್, ಮೂಸಾ ಬಿ.ಚೆರ್ಕಳ, ಅಬ್ದುಲ್ಲಕುಞÂ ಚೆರ್ಕಳ, ಪ್ರಮೀಳಾ ಮಜಲ್, ಬಿ.ಸುಲೋಚನಾ, ಎ.ಬಿ.ಶಾಫಿ, ನ್ಯಾಷನಲ್ ಅಬ್ದುಲ್ಲ ಭಾಗವಹಿಸಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ: ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ
0
ಆಗಸ್ಟ್ 30, 2022
Tags