ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ಮಳೆ ಬಿರುಸುಗೊಂಡಿದ್ದು, ಕಾಸರಗೋಡು ಸೇರಿದಂತೆ 12ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಗಾಳಿಯಿಂದ ಕೂಡಿದ ಮಳೆಯ ಜತೆಗೆ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಎದ್ದೇಳುವ ಸಾಧ್ಯತೆಯಿದ್ದು, ಜನರು ಜಾಗ್ರತೆ ಪಾಲಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
ಮಳೆ ಬಿರುಸುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ವಿಪತ್ತು ನಿವಾರಣಾ ದಳವನ್ನು ಸಜ್ಜುಗೊಳಿಸಲಾಗಿದ್ದು, ಕಂಟ್ರೋಲ್ ರೂಮ್ ಆರಂಭಿಸಲಾಗಿದೆ. ಮಳೆ ದುರಂತದ ಬಗ್ಗೆ ಮಾಹಿತಿಯನ್ನು ನಿಯಂತ್ರಣ ಕೊಠಡಿಯ ಮೊಬೈಲ್ ಸಂಖ್ಯೆಗಳಿಗೆ(9895622638, 7012018353)ನೀಡುವಂತೆ ಪ್ರಕಟಣೆ ತಿಳಿಸಿದೆ.
ಬಿರುಸುಗೊಂಡ ಮಳೆ: ಕಾಸರಗೋಡಿನಲ್ಲಿ ಯೆಲ್ಲೋ ಅಲರ್ಟ್
0
ಆಗಸ್ಟ್ 04, 2022