ಮಲಪ್ಪುರಂ: ಕೇರಳದಲ್ಲಿ ಜಲಾವೃತಗೊಂಡಿರುವ ರಸ್ತೆಗಳ ಶೋಚನೀಯ ಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತರಲು ಯುವಕನೊಬ್ಬ ವೈವಿಧ್ಯಮಯ ಪ್ರತಿಭಟನೆ ನಡೆಸಿದ ವಿದ್ಯಮಾನವೊಂದು ಗಮನ ಸೆಳೆದಿದೆ.
ರಸ್ತೆಯ ಹಳ್ಳದಲ್ಲಿ ಕಟ್ಟಿನಿಂತ ನೀರಿನಲ್ಲಿ ಸ್ನಾನ ಮಾಡಿ ಬಟ್ಟೆ ಒಗೆದು ಯುವಕ ಪ್ರತಿಭಟನೆ ನಡೆಸಿದ್ದಾನೆ. ಮಲಪ್ಪುರಂ ಪಂಡಿಕ್ಕಾಡ್ ರಸ್ತೆಯಲ್ಲಿ ಈ ವಿನೂತನ ಶೈಲಿನ ಪ್ರತಿಭಟನಾ ಘಟನೆ ನಿನ್ನೆ ನಡೆದಿದೆ.
ಹಮ್ಜಾ ಎಂಬ ಯುವಕ ಪ್ರತಿಭಟನೆ ನಡೆಸಿದ ವ್ಯಕ್ತಿ. ಕೇರಳದ ಎಲ್ಲ ರಸ್ತೆಗಳ ಸ್ಥಿತಿ ಇದೇ ಎನ್ನುತ್ತಾರೆ ಯುವಕ. ಪಾಂಡಿಕ್ಕಾಡ್ ನಿಂದ ಪಾಲಕ್ಕಾಡ್‍ಗೆ ಹೋಗುವ ರಸ್ತೆಗಳಲ್ಲಿ ಎಲ್ಲಿ ನೋಡಿದರೂ ಗುಂಡಿಗಳೇ. ಮೂರು ತಿಂಗಳ ಹಿಂದೆ ಎಲ್ಲ ರಸ್ತೆಗಳಿಗೆ ಮರು ಟಾರ್ ಮಾಡಲಾಗಿತ್ತು. ಆದರೆ ಮತ್ತೆ ಹೊಂಡಗಳು ನಿರ್ಮಾಣವಾಗಿವೆ.
ಇದನ್ನು ಸಾರ್ವಜನಿಕರ ಗಮನಕ್ಕೆ ತರುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ ಕಟ್ಟಿನಿಂತ ನೀರಲ್ಲಿ ಸ್ನಾನ ಮಾಡುವ ಯೋಚನೆ ಬಂತು. ಶಾಸಕ ಯು.ಎ.ಲತೀಫ್ ಅವರು ರಸ್ತೆಯ ಗುಂಡಿಯಲ್ಲಿ ತಾನು ಸ್ನಾನ ಮಾಡುವಾಗ ಈ ಮೂಲಕ ಹಾದು ಹೋಗಿದ್ದಾರೆ ಎಂದೂ ಯುವಕ ಹೇಳುತ್ತಾನೆ.
ಹೊಂಡದಲ್ಲಿ ಸ್ನಾನ ಮಾಡಲು, ಬಟ್ಟೆ ಒಗೆಯಲು ನೀರಿದೆ. ಇಲ್ಲಿ ಅನೇಕ ಅಪಘಾತಗಳು ಮತ್ತು ಸಾವುಗಳು ಸಂಭವಿಸುತ್ತವೆ. ಅಧಿಕಾರಿಗಳು ಕೂಡ ಈ ಬಗ್ಗೆ ಗಮನ ಹರಿಸದ ಕಾರಣ ಪ್ರತಿಭಟನೆ ನಡೆಸಿರುವುದಾಗಿಯೂ ಯುವಕ ಹೇಳಿದ್ದಾನೆ. ಕೇರಳದ ರಸ್ತೆಗಳು ಕೊಚ್ಚೆ ಗುಂಡಿಗಳಾಗಿ ಮಾರ್ಪಟ್ಟು ಜನರ ಸ್ನಾನ, ಬಟ್ಟೆ ಒಗೆಯುವಂತಹ ಅಗತ್ಯ ಕೆಲಸಗಳಿಗೆ ಸುಲಭದ ದಾರಿ ಮಾಟಿಕೊಟ್ಟಿದೆ ಎಂದು ವ್ಯಂಗ್ಯವಾಗಿ ಹಂಸ ಹೇಳಿರುವರು.
ನಡು ರಸ್ತೆಯಲ್ಲಿ ಸ್ನಾನಗೈದು ಬಟ್ಟೆ ಒಗೆದ ಯುವಕ: ವಿಶಿಷ್ಟ ಪ್ರತಿಭಟನೆ ಮೂಲಕ ಹೀಗೊಂದು ಎತ್ತರದ ಧ್ವನಿ
0
ಆಗಸ್ಟ್ 08, 2022
Tags