ಕಾಸರಗೋಡು: ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ, ಯುವ ಸಂಘ ಕಾಸರಗೋಡು ಇದರ ನೇತೃತ್ವದಲ್ಲಿ ಬೀರಂತಬೈಲ್‍ನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸಭಾ ಭವನದಲ್ಲಿ ಸ್ವಜಾತಿ ಬಾಂಧವರಿಗೆ ಬ್ಯಾಂಕ್ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮ ಜರಗಿತು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟ್ರಮಣ ಅವರು ಅಧ್ಯಕ್ಷತೆ ವಹಿಸಿದರು. ಯೂನಿಯನ್ ಬ್ಯಾಂಕ್ ಮಡಿಕೇರಿ ಶಾಖಾಧಿಕಾರಿ ಭವ್ಯ ರಾಜೇಶ್ ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ನೀಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್‍ನ ಅಧಿಕಾರಿ ಅನನ್ಯ ರಾಮಮೂರ್ತಿ ಬೀರಂತಬೈಲ್ ಅವರು ಬ್ಯಾಂಕ್ ಪರೀಕ್ಷಾ ಕುರಿತು ಮಾಹಿತಿ ನೀಡಿದರು. ಕ್ಯಾಂಪೆÇ್ಕೀ ನೌಕರರಾದ ಅನಂತೇಶ್ವರ್ ಅವರು ಪ್ರೇರಕರಾಗಿ ತರಗತಿ ನಡೆಸಿದರು.
ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ಸತೀಶ್ ದೋಣಿಬಾಗಿಲು, ಜಿಲ್ಲಾ ಮಹಿಳಾ ಸಂಘದ ಗೌರವಾಧ್ಯಕ್ಷೆ ಆಶಾ ರಾಧಾಕೃಷ್ಣ ಅಣಂಗೂರು, ಜಿಲ್ಲಾ ಮಹಿಳಾ ಸಂಘದ ಅಧ್ಯಕ್ಷೆ ಉಷಾ ಕಿರಣ್ ಅಣಂಗೂರು, ಉಷಾ ಟೀಚರ್, ಜಿಲ್ಲಾ ಯುವ ಸಂಘದ ಅಧ್ಯಕ್ಷ ಅಕ್ಷತ್ ಉಪಸ್ಥಿತರಿದ್ದರು. ಜಿಲ್ಲಾ ಯುವ ಸಂಘದ ಕಾರ್ಯದರ್ಶಿ ಕಾರ್ತಿಕ್, ಕ್ರೀಡಾ ಕಾರ್ಯದರ್ಶಿ ಪವನ್, ಸದಸ್ಯರಾದ ಆದರ್ಶ್, ದಿವ್ಯಶ್ರೀ, ಪೂಜಾ ಸಹಕರಿಸಿದರು. ಜಿಲ್ಲಾ ಯುವ ಕಾರ್ಯದರ್ಶಿ ತೇಜಶ್ರೀ ಸ್ವಾಗತಿಸಿದರು. ಸಿಂಚನ ಮತ್ತು ಶರಣ್ಯ ಚಂದ್ರಗಿರಿ ಪ್ರಾರ್ಥನೆ ಹಾಡಿದರು. ಮೋನಿಕಾ ವಂದಿಸಿದರು. ಧನರಾಜ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
ಬ್ಯಾಂಕ್ ಪರೀಕ್ಷಾ ಮಾರ್ಗದರ್ಶನ ಕಾರ್ಯಕ್ರಮ
0
ಆಗಸ್ಟ್ 30, 2022