ಮಲಪ್ಪುರಂ: ಕಾಶ್ಮೀರ ವಿಚಾರವಾಗಿ ಫೇಸ್‍ಬುಕ್‍ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದ ಶಾಸಕ ಕೆ.ಟಿ.ಜಲೀಲ್ ಅವರ ಎಡಪಾಲ್ ಕಚೇರಿ ಮೇಲೆ ಯುವಮೋರ್ಚಾ ಕಾರ್ಯಕರ್ತರು ಮಸಿ ಬಳಿದು ಪ್ರತಿಭಟನೆ ನಡೆಸಿದರು.
ಯುವಮೋರ್ಚಾ ಜಿಲ್ಲಾಧ್ಯಕ್ಷ ಸಜೀಶ ಎಳೈಲ್ ನೇತೃತ್ವದಲ್ಲಿ ಎಡಪಾಲ ಕಚೇರಿಯಲ್ಲಿ ಕರಿ ಬಣ್ಣ ಎರಚಲಾಯಿತು. ಕಾಶ್ಮೀರ ಭಾರತಕ್ಕೆ ಸೇರಿದ್ದು, ಕೆಟಿ ಜಲೀಲ್ ಅದನ್ನು ದಿಕ್ಕೆಡಿಸಲು ನೋಡಬಾರದು ಎಂದು ಯುವಮೋರ್ಚಾ ಹೇಳಿಕೆ ನೀಡಿದೆ.
ಜಲೀಲ್ ಅವರ ಫೇಸ್ ಬುಕ್ ಪೋಸ್ಟ್ ನಲ್ಲಿ ಆಜಾದ್ ಕಾಶ್ಮೀರ್ ಎಂಬ ವಾಕ್ಯ ಭಾರೀ ವಿವಾದ ಸೃಷ್ಟಿಸಿತ್ತು. ಆಗ ಜಲೀಲ್ ವಿರುದ್ಧ ಬಿಜೆಪಿ ತೀವ್ರವಾಗಿ ಹರಿಹಾಯ್ದಿತ್ತು. ಪ್ರತಿಭಟನೆ ತೀವ್ರಗೊಂಡ ನಂತರ ಜಲೀಲ್ ಹೇಳಿಕೆಯನ್ನು ಹಿಂಪಡೆದರು.
ಆದರೆ, ಜಲೀಲ್ ಹೇಳಿಕೆಗೆ ಕ್ಷಮೆಯಾಚಿಸಲು ಅಥವಾ ವಿμÁದ ವ್ಯಕ್ತಪಡಿಸಲು ಸಿದ್ಧರಾಗಿಲ್ಲ. ಪೋಸ್ಟ್‍ನಲ್ಲಿನ ಕಾಮೆಂಟ್‍ಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಜಲೀಲ್ ಸಮರ್ಥಿಸಲಾಗಿದೆ ಎಂದು ಜಲೀಲ್ ತಿಳಿಸಿರುವರು. ರಾಜ್ಯ, ದೇಶದ ಒಳಿತಿಗಾಗಿ ಹೇಳಿಕೆ, ಬರಹವನ್ನು ಹಿಂಪಡೆಯುತ್ತಿರುವುದಾಗಿಯೂ ಜಲೀಲ್ ಹೇಳಿದ್ದಾರೆ.
ಕಾಶ್ಮೀರದ ಉಲ್ಲೇಖ; ಕೆ ಟಿ ಜಲೀಲ್ ವಿರುದ್ಧ ಯುವಮೋರ್ಚಾ ಪ್ರತಿಭಟನೆ
0
ಆಗಸ್ಟ್ 16, 2022
Tags