ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು ಹರ್ ಘರ್ ತಿರಂಗ ಅಭಿಯಾನದ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಭಾತ ಫೇರಿ ಕಾರ್ಯಕ್ರಮವನ್ನು ಆಯೋಜಿಸಿತು.
ಸಮಾಜಕಾರ್ಯ, ಯೋಗ ಅಧ್ಯಯನ, ಕನ್ನಡ ಮತ್ತು ಎ.ಪಿ.ಜೆ. ಅಬ್ದುಲ್ ಕಲಾಂ ವಿಸ್ತರಣಾ ಚಟುವಟಿಕೆಗಳ ಕೇಂದ್ರ ಜಂಟಿಯಾಗಿ ಪೆರಿಯಾದ ಕಲಾಂ ನಗರದಲ್ಲಿ ಕಾರ್ಯಕ್ರಮ ಆಯೋಜಿಸಿತ್ತು. ಸ್ವಾತಂತ್ರ್ಯದ ವೈಭವ ಮತ್ತು ಹೋರಾಟ ಎಂಬ ಧ್ಯೇಯದೊಂದಿಗೆ ಫ್ಲಾಶ್ ಮೋಬ್ ನಡೆಸಲಾಯಿತು. ಸ್ವಾತಂತ್ರ್ಯೋತ್ಸವದ ಅಮೃತ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಜನತೆಗೆ ವಿದ್ಯಾರ್ಥಿಗಳು ವಿವರಿಸಿದರು. ಸಮಾಜಕಾರ್ಯ ವಿಭಾಗದ ಅಧ್ಯಕ್ಷ ಡಾ.ಎಂ.ಕೆ. ಮೋಹನ್, ಶಿಕ್ಷಕರಾದ ಡಾ.ಲಕ್ಷ್ಮಿ, ಡಾ.ದಿಲೀಪ್ ದಿವಾಕರ್, ಎ. ಭವಿತಾ, ಎಂ. ಮಹೇಶ್ ನೇತೃತ್ವ ವಹಿಸಿದ್ದರು. ವಿದ್ಯಾರ್ಥಿಗಳಾದ ಹಬೀಬಿ, ಸೋನಿತಾ, ಅಭಿಜಿತ್, ಜಾನ್ವಿ, ಅನುಶ್ರೀ ಉಪಸ್ಥಿತರಿದ್ದರು. ಫ್ಲಾಶ್ ಮೋಬ್ ಸ್ಥಳೀಯ ನಿವಾಸಿಗಳಿಗೆ ಹೊಸ ಅನುಭವ ತಂದುಕೊಟ್ಟಿತ್ತು.
ಆಜಾದಿ ಕಾ ಅಮೃತ್ ಮಹೋತ್ಸವ ಕೇರಳ ಕೇಂದ್ರೀಯ ವಿವಿಯಿಂದ ಪ್ರಭಾತ ಫೇರಿ
0
ಆಗಸ್ಟ್ 13, 2022
Tags