ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯ ಆಶ್ರಯಲ್ಲಿ ಕಳೆದ 14 ವರ್ಷದಿಂದ ಬದಿಯಡ್ಕದಲ್ಲಿ ಶಾರದೋತ್ಸವವು ನಡೆದು ಬರುತ್ತಿದೆ. ಇದರ ಪೂರ್ವಭಾವಿ ಸಿದ್ಧತಾ ಸಭೆ ಭಾನುವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರಗಿತು. ಯಕ್ಷಗಾನ ಕಲಾವಿದ, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ಚನಿಯಪ್ಪ ನಾಯ್ಕ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹಮ್ಮಾಯಿ ಮರಾಟಿ ಸಂಘದ ಮಾಜಿ ಅಧ್ಯಕ್ಷ ಐತ್ತಪ್ಪ ನಾಯ್ಕ್ ಅಡ್ಯನಡ್ಕ ಮಾತನಾಡಿದರು. ಲಲಿತಾ ಕೇಶವ ಖಂಡಿಗೆ, ಸ್ಥಾಪಕ ಅಧ್ಯಕ್ಷ ಈಶ್ವರ ನಾಯ್ಕ ಪೆರಡಾಲ, ಡಾ. ನಾರಾಯಣ ನಾಯ್ಕ್, ಪುಷ್ಪ ಅಮೆಕ್ಕಳ, ವೈ.ನಾರಾಯಣ ನಾ0iÀiï್ಕ, ಕೇಶವ ನಾಯ್ಕ ವಿದ್ಯಾನಗರ ಮಾತನಾಡಿದರು. ಗೌರವಾಧ್ಯಕ್ಷೆ ಕಮಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ರಾಜಗೋಪಾಲ ನವಕಾನ ಸಭೆಯ ಅಧ್ಯಕ್ಷತೆ ವಹಿಸಿದ್ದರು.
75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ 85 ವರ್ಷದ ಲಕ್ಷ್ಮಿ ಅಮ್ಮ ಮತ್ತು ಸೀತಮ್ಮ ಏತಡ್ಕ ಇವರನ್ನು ಶಾಲು ಹೊದಿಸಿ ಅಭಿನಂದಿಸಲಾಯಿತು. ಧರ್ಮಸ್ಥಳದ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು ಇದೀಗ ನೂರಾರು ಕುಟುಂಬಗಳ ಸದಸ್ಯರನ್ನು ಮದ್ಯವಿಮುಕ್ತರನ್ನಾಗಿಸುವ ಕಾಯಕದಲ್ಲಿ ತೊಡಗಿರುವ ಪ್ರಸಾದ್ ಅವರನ್ನು ಅಭಿನಂದಿಸಲಾಯಿತು. ಆಟಿ ಕೂಟದಲ್ಲಿ ಸುಮಾರು 20 ಮನೆಗಳಿಂದ ಭಕ್ಷ್ಯಗಳನ್ನು ತಯಾರಿಸಿ ರುಚಿ ರುಚಿಹಿತ ತಿಂಡಿ ತಿನಸುಗಳು, ವಿÀವಿಧ ಪಾಕಗಳನ್ನು ತಂದು ಉಣಬಡಿಸಲಾಯಿತು.ಶೋಭಾ ಪ್ರಾರ್ಥನೆ ಹಾಡಿದರು. ಜಯರಾಮ ನಾಯ್ಕ ಸ್ವಾಗತಿಸಿ, ಜಗದೀಶ್ ಕುಂಟಾಲು ವಂದಿಸಿದರು. ಕುಮಾರಿ ವೈಷ್ಣವಿ ಹಾಗೂ ಕುಮಾರಿ ವರ್ಷಲಕ್ಷ್ಮಣ್ ಕಾಯ್ರಕ್ರಮ ನಿರೂಪಿಸಿದರು.
ಮರಾಟಿ ಶಾರದೋತ್ಸವ ಸಮಿತಿ ಸಭೆ; ಸನ್ಮಾನ
0
ಆಗಸ್ಟ್ 18, 2022
Tags