HEALTH TIPS

ಮಕ್ಕಳ ಆರೈಕೆಯಲ್ಲಿ ಕೇರಳ ಉತ್ತರ ಭಾರತದಿಂದ ಕಲಿಯಬೇಕು: ಕೋಝಿಕ್ಕೋಡ್ ಮೇಯರ್: ಮೇಯರ್ ಹೇಳಿಕೆಯನ್ನು ವಿವಾದಗೊಳಿಸಿದ ಸಿಪಿಎಂ ನಾಯಕರು: ನನ್ನ ಮನೆಯಲ್ಲೂ ಸರಸ್ವತಿ ದೇವಿಯ ಚಿತ್ರವಿದೆ ಎಂದ ಮೇಯರ್

         
              ಕೋಝಿಕ್ಕೋಡ್: ಮಕ್ಕಳ ಆರೈಕೆಯಲ್ಲಿ ಕೇರಳ ಉತ್ತರ ಭಾರತದಿಂದ ಸಾಕಷ್ಟು ಕಲಿಯಬೇಕು ಎಂದು ಕೋಝಿಕ್ಕೋಡ್ ಮೇಯರ್ ಹಾಗೂ ಸಿಪಿಎಂ ನಾಯಕಿ ಬೀನಾ ಫಿಲಿಪ್ ಹೇಳಿದ್ದಾರೆ.
        ಕೋಯಿಕ್ಕೋಡ್ ಬಾಲಗೋಕುಲಂ ಆಯೋಜಿಸಿದ್ದ ಮಾತೃ ಸಮ್ಮೇಳನವನ್ನು ಉದ್ಘಾಟಿಸಿ ಮೇಯರ್ ಮಾತನಾಡುತ್ತಿದ್ದರು. ಇದೇ ವೇಳೆ,  ಸಿಪಿಎಂ ನಾಯಕರು ಮೇಯರ್ ಹೇಳಿಕೆಯನ್ನು ವಿವಾದಾತ್ಮಕವಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ.
          ಕೃಷ್ಣನ ಮೂರ್ತಿಗೆ ತುಳಸಿಮಾಲೆ ಹಾಕುವುದು ಸೇರಿದಂತೆ ಮೇಯರ್ ವೇದಿಕೆ ಮೇಲೆ ಮಾಡಿದ್ದನ್ನು ಸಿಪಿಎಂ ನಾಯಕರು ತಿರುಚಿದರು. ಮಾಧ್ಯಮಗಳ ಸಹಾಯದಿಂದ ಸಿಪಿಎಂ ನಾಯಕರು ಮೇಯರ್ ವಿರುದ್ಧ ರಹಸ್ಯವಾಗಿ ಮತ್ತು ಬಹಿರಂಗವಾಗಿ ದಾಳಿಯನ್ನು ತೀವ್ರಗೊಳಿಸುತ್ತಿದ್ದಾರೆ. ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಡಿ ಎಂದು ಪಕ್ಷ ಹೇಳಿಲ್ಲ ಎಂದು ಬೀನಾ ಫಿಲಿಪ್ ಹೇಳಿದ್ದಾರೆ.
          ಬಾಲಗೋಕುಲಂ ಎಂದಿಗೂ ಆರ್ ಎಸ್ ಎಸ್ ನ ಅಂಗಸಂಸ್ಥೆಯಾಗಿ ಕಾಣಲಿಲ್ಲ. ನಾವು ಅಲ್ಲಿ ಜಾತಿವಾದದ ಬಗ್ಗೆ ಮಾತನಾಡುವುದಿಲ್ಲ. ಉತ್ತರ ಭಾರತದಲ್ಲಿ ಯಾವ ಮನೆಗೆ ಹೋದರೂ ಮಕ್ಕಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಕೇರಳದಲ್ಲಿ ನಾವು ಅವರಿಗೆ ಸ್ವಾರ್ಥದಿಂದ ಕಲಿಸುತ್ತೇವೆ.
          ಇದೆಲ್ಲವನ್ನು ಉತ್ತರ ಭಾರತದ ಸಂಬಂಧಿಕರು ತನಗೆ ಹೇಳಿರುವರು. ಉಣ್ಣಿಕಣ್ಣನನ್ನು(ಬಾಲಕೃಷ್ಣ) ಪ್ರೀತಿಸುವವರು ತಮ್ಮ ಮಕ್ಕಳನ್ನು ಉಣ್ಣಿಕಣ್ಣನ್‍ನಂತೆ ಕಾಣಬೇಕು. ಅದೊಂದು ಸಂಸ್ಕøತಿಯಾಗುತ್ತದೆ. ಆದರೆ ಎಲ್ಲ ಮಕ್ಕಳನ್ನು ಭಕ್ತರನ್ನಾಗಿ ರೂಪಿಸಬೇಕೆಂದು ನಾನು ಹೇಳಿಲ್ಲ, ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮೇಯರ್ ಹೇಳಿದರು.
          ಹಲವೆಡೆ ಬಿಜೆಪಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದಿದೆ.  ಬಾಲಗೋಕುಲಂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿನ ಮಾತೆಯರನ್ನುದ್ದೇಶಿಸಿ ಮಾತನಾಡಿರುವೆ. ನೀವು  ದೇವಕಿಯರೋ ಅಥವಾ ಯಶೋಧೆಯರೋ ಎಂದು ಅವರನ್ನು ಕೇಳಿದೆ. ನಾನು  ತಮ್ಮ ಯೌವನದಲ್ಲಿ ಅಧ್ಯಯನ ಮಾಡಿದ ಪೌರಾಣಿಕ ಪಾತ್ರದ ಬಗ್ಗೆ ಅವರೊಂದಿಗೆ ಮಾತನಾಡಿದೆ ಎಂದು ಮೇಯರ್ ತಿಳಿಸಿದರು.
           ನನ್ನ ಮನೆಯಲ್ಲಿ ಸರಸ್ವತಿ ದೇವಿಯ ಚಿತ್ರವೂ ಇದೆ. ಮಲಯಾಳಂ ಓದಿದ ಯಾರಾದರೂ ವಿದ್ಯಾ ಸರಸ್ವತಿ ದೇವಿಯನ್ನು  ಜೊತೆಗಿರಿಸದೆ ಇರಲಾರರು. ಇದು ಧರ್ಮದ ಏಕಸ್ವಾಮ್ಯವಲ್ಲ, ಇದು ನಮ್ಮ ಪರಂಪರೆ. ಈ ಎಲ್ಲಾ ಪರಿಕಲ್ಪನೆಗಳು ಭಾರತದಲ್ಲಿ ಯಾರಿಗಾದರೂ ಆನುವಂಶಿಕವಾಗಿರುತ್ತವೆ. ಇದನ್ನು ತಪ್ಪಾಗಿ ಅರ್ಥೈಸುವುದನ್ನು ತಡೆಯಲು ಏನು ಮಾಡಬೇಕು ಎಂದು ಬೀನಾ ಫಿಲಿಪ್ ಕೇಳಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries