ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಟೆಸ್ಲಾ ಅಂಡ್ ಸ್ಪೇಸ್ ಕಂಪನಿ ಸಿಇಒ ಇಲಾನ್ ಮಸ್ಕ್ ಅವರು ಭಾರತದ 24 ವರ್ಷದ ಯುವ ಟೆಕ್ಕಿಯೊಬ್ಬರನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ.
ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಯುವ ಜನತೆಯೊಂದಿಗೆ ಹೆಚ್ಚು ಸಂಪರ್ಕದಲ್ಲಿರುವ ಇಲಾನ್ ಮಸ್ಕ್, ಪುಣೆ ಮೂಲದ ಪ್ರಣಯ್ ಪಾತೋಳೆ ಅವರನ್ನು ಟೆಕ್ಸಾಸ್ ನ ಟೆಸ್ಲಾ ಕಾರು ತಯಾರಿಕಾ ಘಟಕದಲ್ಲಿ ಭೇಟಿಯಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಣಯ್, ಇಲಾನ್ ಮಸ್ತ್ ಅವರೊಂದಿಗೆ ಇರುವ ಫೋಟೋ ಹಂಚಿಕೊಂಡಿದ್ದಾರೆ.'ನಿಮ್ಮನ್ನು ಭೇಟಿಯಾಗಿದ್ದು ಅದ್ಬುತ ಕ್ಷಣವಾಗಿತ್ತು. ಅತ್ಯಂತ ವಿನಯಪೂರ್ವಕ ಹಾಗೂ ಸರಳ ಸಜ್ಜನಿಕೆಯ ಮನುಷ್ಯನನ್ನು ಎಲ್ಲಿಯೂ ನೋಡಿಲ್ಲ. ಲಕ್ಷಾಂತರ ಜನರಿಗೆ ನೀವು ಸ್ಪೂರ್ತಿಯಾಗಿದ್ದಿರಿ ಎಂದು ಪ್ರಣಯ್ ಪಾತೋಳೆ ಟ್ವೀಟ್ ಮಾಡಿದ್ದಾರೆ.
It was so great meeting you at the Gigafactory Texas. Never seen such a humble and down-to-earth person. You're an inspiration to the millions