ತಿರುವನಂತಪುರ: ಭಾರತೀಯ ಸ್ವಾತಂತ್ರ್ಯ ಸಂಗ್ರಾಮವು ಎಲ್ಲಾ ಧಾರ್ಮಿಕ ಮತ್ತು ಅನ್ಯಧರ್ಮೀಯರನ್ನು ಒಳಗೊಂಡ ಜನಾಂದೋಲನವಾಗಿತ್ತು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಆ ಚಳವಳಿಯ ಶಕ್ತಿಯು ಸಂವಿಧಾನದಲ್ಲಿ ಜಾತ್ಯತೀತತೆಯ ಮೂಲಭೂತ ದೃಷ್ಟಿಕೋನಗಳಿಗೆ ಕೊಡುಗೆ ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ತಿರುವನಂತಪುರ ಸೆಂಟ್ರಲ್ ಸ್ಟೇಡಿಯಂನಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
'ಭಾರತದ ಸಂವಿಧಾನವು ದೇಶದ ವೈವಿಧ್ಯತೆಗಳನ್ನು ಸೇರಿಸಿ ರಚನೆಯಾಗಿದೆ. ಸಂವಿಧಾನದ ಮೂಲ ಮೌಲ್ಯಗಳಾದ ಸೆಕ್ಯುಲರಿಸಂ, ಫೆಡರಲಿಸಂ, ಸಮಾನತೆ ಮತ್ತು ಸ್ವಾತಂತ್ರ್ಯ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳಾಗಿದ್ದವು ಎಂಬುದನ್ನು ಗುರುತಿಸಬೇಕು. ಸ್ವಾತಂತ್ರ್ಯ ಚಳವಳಿಗಳು ನಮಗೆ ನೀಡಿದ ಈ ದೃಷ್ಟಿಕೋನದ ಪರಿಣಾಮಗಳೇ ನಾವು ಕೋಮು ಸಂಘರ್ಷ ಮತ್ತು ಧ್ರುವೀಕರಣದ ಪ್ರಯತ್ನಗಳನ್ನು ಎದುರಿಸಲು ಮತ್ತು ತೊಡೆದುಹಾಕಲು ಸಮರ್ಥರಾಗಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
"ವೈವಿಧ್ಯಮಯ ಸಂಸ್ಕøತಿ ಮತ್ತು ಜೀವನ ವಿಧಾನಗಳನ್ನು ಹೊಂದಿರುವ ದೇಶದಲ್ಲಿ, ಫೆಡರಲ್ ತತ್ವಗಳನ್ನು ಅದರ ಆಧಾರವಾಗಿ ಅಭಿವೃದ್ಧಿಪಡಿಸಬೇಕು. ಫೆಡರಲಿಸಂ ಕೂಡ ದೇಶದ ಅಸ್ತಿತ್ವದ ಮೂಲ ಅಂಶವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು. ‘‘ರಾಜ್ಯದ ಅಭಿವೃದ್ಧಿಗೆ ಅಗತ್ಯ ಸಂಪತ್ತು ಒದಗಿಸಬೇಕು. ಸ್ಥಳೀಯಾಡಳಿತ ಸಂಸ್ಥೆಗಳನ್ನು ಸ್ಥಳೀಯ ಸರ್ಕಾರಗಳಾಗಿ ಪರಿವರ್ತಿಸುವ ಮೂಲಕ ಅಭಿವೃದ್ಧಿ ಮತ್ತು ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಕಡು ಬಡತನ, ವಸತಿ ರಹಿತರ ನಿರ್ಮೂಲನೆಗೆ ರಾಜ್ಯ ಸರಕಾರ ಆದ್ಯತೆ ನೀಡುತ್ತಿದೆ. ಎಲ್ಲ ಅಭಿವೃದ್ಧಿಗೆ ಮೂಲಸೌಕರ್ಯ ಅಭಿವೃದ್ಧಿ ಆಧಾರದಲ್ಲಿ ಕೆಐಎಫ್‍ಬಿ(ಕಿಪ್ಬಿ) ಯೋಜನೆಗಳನ್ನು ಅನುμÁ್ಠನಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಗಮನ ಸೆಳೆದರು.
''ದೇಶದಲ್ಲಿ ಒಕ್ಕೂಟ ತತ್ವಗಳು ಅರಳಬೇಕು. ದೇಶದ ಉಳಿವಿಗೆ ಫೆಡರಲಿಸಂ ಮೂಲ ಅಂಶ. ಜಾತ್ಯತೀತತೆ ದೇಶದ ವಿಶಿಷ್ಟ ಲಕ್ಷಣ. ಫೆಡರಲಿಸಂನ ಶಕ್ತಿಯು ಬಲವಾದ ಕೇಂದ್ರ ಮತ್ತು ಸಂತೃಪ್ತ ರಾಜ್ಯಗಳು. ಮೂಲಭೂತ ವಾಸ್ತವವನ್ನು ಮರೆಯುವ ಧೋರಣೆ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಕೊಲ್ಲುತ್ತಿದೆ. ಜಾತ್ಯತೀತತೆಗೆ ಧಕ್ಕೆಯಾಗುತ್ತಿದೆ’ ಎಂದು ಮುಖ್ಯಮಂತ್ರಿ ಹೇಳಿದರು.
ಈ ಮಧ್ಯೆ, ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪತ್ತನಂತಿಟ್ಟದಲ್ಲಿ ಹಾರಿಸಿದ ರಾಷ್ಟ್ರಧ್ವಜವನ್ನು ಏರಿಸುವ ಹಂತದಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗೆ ಸಂಕಷ್ಟ ಎದುರಾಯಿತು. ಅರ್ಧ ಎತ್ತಿದ ಧ್ವಜ ಬಳಿಕ ಹಗ್ಗದಲ್ಲಿ ಸಿಲುಕಿಕೊಂಡು ಗೊಜಲಾಯಿತು. ಧ್ವಜವನ್ನು ಆ ಬಳಿಕ ಕೆಳಗಿಳಿಸಿ ಸರಿಪಡಿಸಿ ಮತ್ತೆ ಎತ್ತಲಾಯಿತು. ಹಗ್ಗಕ್ಕೆ ಸಿಲುಕಿ ಕೆಳಗೆ ಇಳಿಸಿದ ಧ್ವಜವನ್ನು ನಂತರ ಪೋಲೀಸ್ ಅಧಿಕಾರಿಗಳು ಏರಿಸಿದರು. ಸಚಿವೆ ವೀಣಾ ಜಾರ್ಜ್ ಹಾಗೂ ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಸಚಿವೆ ವೀಣಾ ಜಾರ್ಜ್ ಅವರು ಸ್ವಾತಂತ್ರ್ಯೋತ್ಸವದ ಅಂಗವಾಗಿ ಗೌರವ ವಂದನೆ ಸ್ವೀಕರಿಸಿದರು.
ಭಾರತೀಯ ಸ್ವಾತಂತ್ರ್ಯ ಹೋರಾಟವು ಧಾರ್ಮಿಕ ಮತ್ತು ವಿವಿಧ ಧರ್ಮೀಯರನ್ನು ಒಳಗೊಂಡ ಜನಾಂದೋಲನವಾಗಿತ್ತು: ಪಿಣರಾಯಿ ವಿಜಯನ್
0
ಆಗಸ್ಟ್ 15, 2022