ತಿರುವನಂತಪುರ: ರಾಜ್ಯದಲ್ಲಿ ಮಾದಕ ವಸ್ತುಗಳ ಸೇವನೆ ಮತ್ತು ಪೂರೈಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಉನ್ನತ ಮಟ್ಟದ ಸಭೆಯ ಬಳಿಕ ಮಾತನಾಡಿದ ಮುಖ್ಯಮಂತ್ರಿ, ಮಾದಕ ವಸ್ತು ಕಳ್ಳಸಾಗಣೆಯಲ್ಲಿ ತೊಡಗಿರುವವರಿಗೆ ಹೆಚ್ಚಿನ ಶಿಕ್ಷೆ ವಿಧಿಸಲಾಗುವುದು. ಪುನರಾವರ್ತಿತ ಅಪರಾಧಿಗಳ ವಿರುದ್ಧ ತಡೆಗಟ್ಟುವ ಬಂಧನ ಸೇರಿದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ಕಾಪ್ಪ ರಿಜಿಸ್ಟರ್ ತಯಾರಿಸುವ ಮಾದರಿಯಲ್ಲಿ ಮಾದಕ ದ್ರವ್ಯ ಅಪರಾಧಿಗಳ ಡೇಟಾ ಬ್ಯಾಂಕ್ ತಯಾರಿಸಲಾಗುವುದು. ಗಡಿದಾಟಿ ಇತರ ರಾಜ್ಯಗಳಿಂದ ಕೇರಳಕ್ಕೆ ಬರುವ ರೈಲುಗಳಲ್ಲಿ ತಪಾಸಣೆಯನ್ನು ಬಲಪಡಿಸಲಾಗುವುದು. ರಾಜ್ಯಾದ್ಯಂತ ಪೆÇಲೀಸ್ ಮತ್ತು ಅಬಕಾರಿ ನೇತೃತ್ವದಲ್ಲಿ ವಿಶೇಷ ಮಾದಕ ದ್ರವ್ಯ ವಿರೋಧಿ ಆಂದೋಲನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಮಾದಕ ವಸ್ತು ವಿರೋಧಿ ಅಭಿಯಾನಕ್ಕಾಗಿ ಗಾಂಧಿ ಜಯಂತಿ ಆಚರಣೆಯನ್ನು ಬಳಸಿ ಉಪಕ್ರಮ ಕೈಗೊಳ್ಳಲಾಗುವುದು. ಮಾದಕ ವ್ಯಸನದ ವಿರುದ್ಧ ಹೋರಾಟವನ್ನು ಜನಾಂದೋಲನವಾಗಿ ಹಮ್ಮಿಕೊಳ್ಳಲಾಗುವುದು. ಯುವಕರು, ಮಹಿಳೆಯರು, ಕುಟುಂಬಶ್ರೀ ಕಾರ್ಯಕರ್ತರು, ಸಮುದಾಯ ಸಂಘಟನೆಗಳು, ಗ್ರಂಥಾಲಯಗಳು, ಕ್ಲಬ್‍ಗಳು,ಮತ್ತು ಸಾಮಾಜಿಕ-ಸಾಂಸ್ಕøತಿಕ-ರಾಜಕೀಯ ಸಂಘಗಳನ್ನು ಇದರಲ್ಲಿ ಜೋಡಿಸಲಾಗುವುದು. ಇದಕ್ಕೆ ಸ್ಪಷ್ಟ ರೂಪುರೇμÉ ಸಿದ್ಧಪಡಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.
ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಅದಕ್ಕೆ ಸಂಬಂಧಿಸಿದ ಅಪರಾಧಗಳ ಹೆಚ್ಚಳದ ದೃಷ್ಟಿಯಿಂದ ಸರ್ಕಾರದ ವಿರುದ್ಧ ಟೀಕೆಗಳು ಬಲವಾಗಿದ್ದವು. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಮಾದಕವಸ್ತು ಕಳ್ಳಸಾಗಣೆದಾರರ ಡೇಟಾ ಬ್ಯಾಂಕ್ ಸಿದ್ಧಪಡಿಸಲಾಗುವುದು: ಮಾದಕ ದ್ರವ್ಯ ಸೇವನೆ ಮತ್ತು ಪೂರೈಕೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ: ಜಾಗೃತಿ ಅಭಿಯಾನ
0
ಆಗಸ್ಟ್ 31, 2022
Tags