ಬದಿಯಡ್ಕ: ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯÀಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ವ್ಯವಸ್ಥಾಪಕ ಕೆ.ಎನ್ ಕೃಷ್ಣ ಭಟ್ ಧ್ವಜಾರೋಹಣಗೈದರು. ಸ್ವಾತಂತ್ರ್ಯ ಹೋರಾಟಗಾರರ ವೇಷಗಳೊಂದಿಗೆ ಮಕ್ಕಳ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಸದಸ್ಯೆ ಜಯಶ್ರೀ ವಹಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಾಯ ಭಟ್, ಕಿಳಿಂಗಾರು ಎಜುಕೇಶನ್ ಕಮಿಟಿಯ ಸದಸ್ಯ ಕೆ ರಾಮಕೃಷ್ಣ ಭಟ್, ಶಿವಪ್ರಸಾದ್ ಎಚ್.ಎಂ, ಪಿ.ಟಿ.ಎ ಅಧ್ಯಕ್ಷ ಪದ್ಮನಾಭ ರೈ ಬಂಡ್ರಡ್ಕ, ಮಾತೃಸಂಘದ ಅಧ್ಯಕ್ಷೆ ಮಮತಾ ಮೆಣಸಿನಪಾರೆ, ಯುವಕೇಸರಿಯ ಸದಸ್ಯ ಅನಿಲ್ ಕುಮಾರ್, ಶಾಲಾ ಶಿಕ್ಷಕಿಯರು, ಅಂಗನವಾಡಿ ಕಾರ್ಯಕರ್ತರು, ಹೆತ್ತವರು, ಸಂಘ ಸಂಸ್ಥೆಯವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಮನೋರಂಜನಾ ಕಾರ್ಯಕ್ರಮಗಳು ಜರಗಿದವು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀವಿದ್ಯಾ ಸ್ವಾಗತಿಸಿ, ಶಿಕ್ಷಕಿ ಮಧುಮತಿ ಕಂಬಾರು ವಂದಿಸಿದರು. ಅಧ್ಯಾಪಕ ಪ್ರದೀಪ್ ಶೆಟ್ಟಿ ಬೇಳ ಕಾರ್ಯಕ್ರಮ ನಿರೂಪಿಸಿದರು.