ತಿರುವನಂತಪುರ: ರಾಜ್ಯದ ವಯನಾಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಆಫ್ರಿಕನ್ ಹಂದಿಜ್ವರ ದೃಢಪಟ್ಟು ನಷ್ಟ ಅನುಭವಿಸಿದ ಹಂದಿ ಸಾಕಣೆದಾರರಿಗೆ ಪರಿಹಾರ ನೀಡುವುದಾಗಿ ಪಶುಸಂಗೋಪನಾ ಇಲಾಖೆ ಸಚಿವೆ ಜೆ.ಚಿಂಚುರಾಣಿ ಘೋಷಿಸಿದ್ದಾರೆ.
ಪಶು ಕಲ್ಯಾಣ ಇಲಾಖೆಯ ಪಶು ರೋಗ ನಿಯಂತ್ರಣ ಯೋಜನೆಯ ಕಾರ್ಪಸ್ ನಿಧಿಯಿಂದ ಲಸಿಕೆ ಹಾಗೂ ಪರಿಹಾರಕ್ಕೆ ಅಗತ್ಯ ಮೊತ್ತವನ್ನು ವ್ಯಯಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ. ರೈತರಿಗೆ ಆಗಿರುವ ನಷ್ಟವನ್ನು ನಿರ್ಣಯಿಸಲು ಆಯಾ ಜಿಲ್ಲಾ ಪಶು ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಆಫ್ರಿಕನ್ ಹಂದಿಜ್ವರ ಪರಿಹಾರ ಶೀಘ್ರ ವಿತರಣೆ: ಸಚಿವೆ ಜೆ.ಚಿಂಚುರಾಣಿ
0
ಆಗಸ್ಟ್ 06, 2022
Tags