ಉಪ್ಪಳ: ಸಾಮಾಜಿಕ ಧಾರ್ಮಿಕ ಕಾರ್ಯಕರ್ತರಾಗಿದ್ದು ಕೆನಡಾ ರೀಜೆನ್ಸಿ ಇಂಟರ್‍ನ್ಯಾಶನಲ್ ಥಿಯಾಲಾಜಿಕಲ್ ಕಾಲೇಜಿನ ಗೌರವ ಡಾಕ್ಟರೇಟ್ ಪದವಿ ಪಡೆದ ಹರೀಶ್ ಬೊಟ್ಟಾರಿಯವರಿಗೆ ಊರ ಪೌರ ಸಮ್ಮಾನ ಕಾರ್ಯಕ್ರಮವು ಅ.28 ರಂದು ಬೆಳಗ್ಗೆ 9 ರಿಂದ ಚೇವಾರು ಶಾಲೆಯಲ್ಲಿ ಜರಗಲಿದೆ.
ಸಮಾರಂಭದಲ್ಲಿ ವಿವಿಧ ರಂಗಗಳ ಪ್ರಮುಖರು ಭಾಗವಹಿಸಲಿರುವರು.ಅಲ್ಲದೆ ಸಮಾಜ ಸೇವಕ ಸಾಧಕರನ್ನು ಅಭಿನಂದಿಸಲಾಗುವುದು.ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ,ಸಮ್ಮಾನ ಸಮಿತಿ ಅಧ್ಯಕ್ಷ ಎಂ.ಎಂ ಭÀಟ್, ಪೈವಳಿಕೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಚ್ಯುತ ಚೇವಾರ್, ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎ.ಆರ್ ಸುಬ್ಬಯಕಟ್ಟೆ ,ಚೇವಾರು ದಿನಕರ ಕಾಮತ್,ನಾರಾಯಣ ಸಾಲ್ಯಾನ್,ರಾಘವ ಪೈವಳಿಕೆ,ಈಶ್ವರ ನಾಯಕ್ ಪೆರ್ಮುದೆ, ಬಿ.ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಡಾ.ಹರೀಶ್ ಬೊಟ್ಟಾರಿಗೆ ಸಮ್ಮಾನ :ಆಮಂತ್ರಣ ಪತ್ರಿಕೆ ಬಿಡುಗಡೆ
0
ಆಗಸ್ಟ್ 17, 2022
Tags