ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಮತ್ತಿಬ್ಬರು ಶಂಕಿತ ಹಂತಕರನ್ನು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಬೆಳ್ಳಾರೆ ಸಮೀಪದ ಪಳ್ಳಿಮಜಲು ನಿವಾಸಿಗಳಾದ ಸದ್ದಾಂ (32 ವರ್ಷ) ಹ್ಯಾರಿಸ್ (42 ವರ್ಷ) ಎಂದು ಎಸ್ಪಿ ಋಷಿಕೇಶ್ ಸೋನವಾನೆ ಗುರುತಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಕೆಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದರು.
ಇಬ್ಬರ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 1967ರ ಯುಎ(ಪಿ) ಕಾಯ್ದೆಯ ಸೆಕ್ಷನ್ 16, 18 ಮತ್ತು ಐಪಿಸಿ ಸೆಕ್ಷನ್ 302 ಮತ್ತು 120 ಬಿ ಆರ್/ ಡಬ್ಲ್ಯೂ 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಶಫೀಕ್ ಮತ್ತು ಜಾಕೀರ್ ಎಂಬುವರನ್ನು ಜುಲೈ 28 ರಂದು ಬಂಧಿಸಲಾಗಿತ್ತು. ಈ ಆರೋಪಿಗಳನ್ನು ಪೊಲೀಸರ ವಶಕ್ಕೆ ಪಡೆದ ನಂತರ ವಿಚಾರಣೆ ಮುಂದುವರೆಸಿದಾಗ ಸಿಕ್ಕ ಮತ್ತಷ್ಟು ಸಾಕ್ಷಿ ಆಧಾರಗಳೊಂದಿಗೆ ಸದ್ದಾಂ ಮತ್ತು ಹ್ಯಾರಿಸ್ ಅವರನ್ನು ಬಂಧಿಸಲಾಗಿದೆ.