ಮುಳ್ಳೇರಿಯ: ಬಿರುಸಿನ ಮಳೆಗೆ ದೇಲಂಪಾಡಿ ಪಂಚಾಯಿತಿಯ ಮಯ್ಯಳ ಸೇತುವೆ ಒಂದು ಪಾಶ್ರ್ವ ಕುಸಿದಿದ್ದು, ಈ ಪ್ರದೇಶದ ಹಲವು ಕುಟುಂಬಗಳಿಗೆ ಸಂಪರ್ಕ ಕಡಿದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸೇತುವೆ ಕುಸಿದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಉದುಮ ಶಾಸಕ ಸಿ.ಎಚ್ ಕುಞಂಬು ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದರು.
ದೇಲಂಪಾಡಿ ಪಂಚಾಯಿತಿಯ ಮೂರು ವಾರ್ಡ್‍ಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿರುವ ಸೇತುವೆಯು ಬಿರುಸಿನ ಮಳೆಗೆ ಹೊಳೆಯಲ್ಲಿ ಉಂಟಾದ ಪ್ರವಾಹದಿಂದ ಸೇತುವೆಯ ಒಂದು ಪಾಶ್ರ್ವ ಕುಸಿದು ಸಂಪರ್ಕ ಕಡಿದುಕೊಂಡಿತ್ತು. ಕಡಿಮೆ ಸಾರಿಗೆ ಸೌಲಭ್ಯ ಮತ್ತು ಸಂರಕ್ಷಿತ ಅರಣ್ಯ ಪ್ರದೇಶದಿಂದ ಸುತ್ತುವರಿದಿ ದೇಲಂಪಾಡಿಯ ಸಾಲೆತ್ತಡ್ಕದಲ್ಲಿ ಹಾನಿಗೀಡಾದ ಈ ಸೇತುವೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ಜನಸಂಚಾರಯೋಗ್ಯಗೊಳಿಸುವುದರ ಜತೆಗೆ ಬದಲಿ ಸೇತುವೆ ನಿರ್ಮಿಸಿಕೊಡುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ.
ಶಾಸಕ ಸಿ.ಎಚ್ ಕುಞಂಬು ಅವರ ಸೂಚನೆಯನ್ವಯ ದೇಲಂಪಾಡಿ ಗ್ರಾಪಂ ಅಧ್ಯಕ್ಷೆ ಎ.ಪಿ.ಉಷಾ, ಉಪಾಧ್ಯಕ್ಷ ಡಿ.ಎ.ಅಬ್ದುಲ್ಲಕುಞÂ, ನೀರಾವರಿ ಇಲಾಖೆ ಸಹಾಯಕ ಮಹಾ ಅಭಿಯಂತ ರತ್ನಾಕರನ್, ಸಹಾಯಕ ಅಭಿಯಂತ ನಿವಿಯಾ ಜಾರ್ಜ್ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ತುರ್ತಾಗಿ ತಾತ್ಕಾಲಿಕ ರಸ್ತೆಯನ್ನು ಸಿದ್ಧಪಡಿಸಲು ಸಹ ನಿರ್ಧರಿಸಲಾಯಿತು. ಮಳೆಯ ನಂತರ ಹೊಸ ಸೇತುವೆ ನಿರ್ಮಾಣಕ್ಕೂ ಕ್ರಮಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷೆ ಭರವಸೆ ನೀಡಿದರು.
ಮಯ್ಯಳ ಸಾಲೆತ್ತಡ್ಕ ಸೇತುವೆ ಕುಸಿತ ಬದಲಿ ಸೇತುವೆ ನಿರ್ಮಾಣಕ್ಕೆ ಸ್ಥಳೀಯರ ಆಗ್ರಹ
0
ಆಗಸ್ಟ್ 07, 2022