ಸಮರಸ ಚಿತ್ರಸುದ್ದಿ: ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಬಣ್ಪುತ್ತಡ್ಕ ನಿವಾಸಿ ಕಣ್ಣೂರು ವಿ.ವಿ.ಯ ಎಂ.ಕಾಂ.ಪರೀಕ್ಷೆಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ಷಂಶೀರಾಳನ್ನು ಯೂತ್ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿ ಅಭಿನಂದಿಸಿದೆ. ಯೂತ್ ಕಾಂಗ್ರೆಸ್ ಮಂಡಲಾಧ್ಯಕ್ಷ ನಿಸಾರ್ ಬಣ್ಪುತ್ತಡ್ಕ ಅವರ ನೇತೃತ್ವದಲ್ಲಿ ವಿದ್ಯಾರ್ಥಿನಿಯ ಮನೆಗೆ ತೆರಳಿ ಡಿಸಿಸಿ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಸ್ಮರಣಿಕೆ ನೀಡಿ ಅಭಿನಂದಿಸಿದರು. ಯೂತ್ ಕಾಂಗ್ರೆಸ್ ನೇತಾರರಾದ ಹನೀಫ್ ಎಸ್.ಕೆ,ಅನ್ಸಾರ್, ಆಫೀದ್ ಎಂ.ಬಿ, ವಿನಯ ಮೊದಲಾದವರು ಉಪಸ್ಥಿತರಿದ್ದರು.
ಎಂಕಾಂ ದ್ವಿತೀಯ ರ್ಯಾಂಕ್ ವಿಜೇತೆ ಬಣ್ಪುತ್ತಡ್ಕದ ಷಂಶೀರಾಳಿಗೆ ಯೂತ್ ಕಾಂಗ್ರೆಸ್ ನಿಂದ ಅಭಿನಂದನೆ
0
ಆಗಸ್ಟ್ 02, 2022