ಬದಿಯಡ್ಕ: ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ಶ್ರೀಗಳು ಸೂಚಿಸಿದ ಪ್ರಕಾರ ಮೂರನೇ ಭಾನುವಾರ ಕೇರಳ ಮರಾಟಿ ಸಂರಕ್ಷಣಾ ಸಮಿತಿಯ ಘಟಕ ಬದಿಯಡ್ಕ, ಚೆಂಗಳ ಹಾಗೂ ನೀರ್ಚಾಲು ಘಟಕಗಳ ಮರಾಟಿ ಸಮಾಜಬಾಂಧವರು ಯಾತ್ರೆಯನ್ನು ಕೈಗೊಂಡರು. ಕಾಸರಗೋಡು, ದ.ಕನ್ನಡ, ಕೊಡಗು, ಉಡುಪಿ ಜಿಲ್ಲೆಯ ಸಮಾಜ ಬಾಂಧವರು ಭಾಗವಹಿಸಿದ್ದರು. ಗುರುಗಳು ಆಶೀರ್ವಚನವನ್ನು ನೀಡುತ್ತಾ ತನ್ನನು ತಾನು ಆತ್ಮ ಅವಲೋಕನ ಮಾಡಿದ್ದಲ್ಲಿ ಮನುಷ್ಯ ಜನ್ಮದಲ್ಲಿ ಪ್ರಗತಿಹೊಂದಲು ಸಾಧ್ಯವೆಂದು ಕಿವಿಮಾತು ಹೇಳಿ ಮಂತ್ರಾಕ್ಷತೆಯನ್ನು ನೀಡಿ ಹರಸಿದರು.
ಸಮಾಜದ ವತಿಯಿಂದ ಪಾದಪೂಜೆ ನಡೆಯಿತು. ಯಾತ್ರೆಯಲ್ಲಿ ಭಜನೆಯನ್ನು ಹಾಡುತ್ತಾ ಮಕ್ಕಳಿಗೆ ವಿಶೇಷ ಪೆÇ್ರೀತ್ಸಾಹಕ ಬಹುಮಾನ ನೀಡಿ ಕೃಷ್ಣನಾಯ್ಕ ಮಲ್ಲಡ್ಕ ಸಹಕರಿಸಿದರು. ಬಾಲಕೃಷ್ಣ ನೀರ್ಚಾಲು, ಉದಯಕುಮಾರ್ ಮೈಕುರಿ, ಬಾಲಕೃಷ್ಣ ದೊಡ್ಡಮೂಲೆ, ಮಹೇಶ್ ಓಣಿಯಡ್ಕ, ಶ್ಯಾಮಪ್ರಸಾದ ಮಾನ್ಯ, ಗೋಪಾಲಕೃಷ್ಣ ಬದಿಯಡ್ಕ, ರಾಧಾಕೃಷ್ಣ ಪೈಕ, ಮಹೇಶ್ ಪೈಕ ಮೊದಲಾದವರು ಸಹಕರಿಸಿದರು.
ಮರಾಟಿ ಸಮಾಜದವರಿಂದ ಶೃಂಗೇರಿ ಭೇಟಿ
0
ಆಗಸ್ಟ್ 04, 2022
Tags