ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದ ನವೀಕರಣ ಕಾರ್ಯದ ಅಂಗವಾಗಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ನೈವೇದ್ಯ ಪ್ರಕೋಷ್ಠವನ್ನು ಶ್ರೀದೇವರಿಗೆ ಸಮರ್ಪಿಸುವ ಕಾರ್ಯ ಆ.28ಮತ್ತು 29ರಂದು ಜರುಗಲಿದೆ. ದೇವಸ್ಥಾನದ ತಂತ್ರಿವರ್ಯ ದೇರೆಬೈಲ್ ಶಿವಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
28ರಂದು ಸಂಜೆ 5ಕ್ಕೆ ಶಿಲ್ಪಿ ಮರ್ಯಾದೆ, ನೂತನ ನೈವೇದ್ಯ ಪ್ರಕೋಷ್ಠ ಸಂಗ್ರಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಆಸ್ತುಬಲಿ, ರಕ್ಷೆ ನಡೆಯುವುದು. 29ರಂದು ಬೆಳಗ್ಗೆ 7ರಿಂದ ಚತುರ್ನಾಳಿಕೇರ ಅಷ್ಟದ್ರವ್ಯ ಗಣಪತಿ ಯಾಗ, 8.30ಕ್ಕೆ ನೂತನ ನೈವೇದ್ಯ ಪ್ರಕೋಷ್ಠ ಸಮರ್ಪಣೆ, ಅಗ್ನಿಪ್ರತಿಷ್ಠೆ, ಪ್ರಸನ್ನ ಪೂಜೆ ನಡೆಯಲಿರುವುದು.
ಮಧೂರು ಕ್ಷೇತ್ರ ನವೀಕರಣ ಕಾರ್ಯ: ಇಂದಿನಿಂದ ನೈವೇದ್ಯ ಪ್ರಕೋಷ್ಠ ಸಮರ್ಪಣಾ ಕಾರ್ಯಕ್ರಮ
0
ಆಗಸ್ಟ್ 28, 2022
Tags