ನವದೆಹಲಿ: ಅಲೋಪತಿ ವೈದ್ಯರನ್ನು ಹಂತಕರು ಎಂದು ಆರೋಪಿಸಿದ್ದ, ಬಾಬಾ ರಾಮ್ ದೇವ್ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೋರ್ಟ್, ಯೋಗವನ್ನು ಬಾಬಾ ರಾಮ್ ದೇವ್ ಅವರು ಪ್ರಸಿದ್ಧಗೊಳಿಸಿದ್ದಾರೆ ಎಂಬ
ವಾಸ್ತವವನ್ನು ಒಪ್ಪಿಕೊಂಡೇ, ಆಯುರ್ವೇದ ಪ್ರತಿ ಬಾರಿಯೂ ಕೆಲಸ ಮಾಡಬೇಕಿಲ್ಲ ಹಾಗೂ
ವೈದ್ಯರು, ವ್ಯವಸ್ಥೆಯನ್ನು ಅವರು ನಿಂದಿಸುವಂತಿಲ್ಲ ಎಂಬ ಅಭಿಪ್ರಾಯವನ್ನು
ವ್ಯಕ್ತಪಡಿಸಿದೆ.
ಬಾಬಾ ರಾಮ್ ದೇವ್ ಅವರಿಗೇನಾಗಿದೆ? ನಾವು ಅವರನ್ನೇಕೆ ಪ್ರಸಿದ್ಧಗೊಳಿಸಬೇಕು? ನಾವು
ಅವರನ್ನು ಗೌರವಿಸುತ್ತೇವೆ. ಅವರು ಯೋಗವನ್ನು ಪ್ರಸಿದ್ಧಗೊಳಿಸಿದರು, ಆದರೆ ಬೇರೆ
ವ್ಯವಸ್ಥೆಗಳನ್ನು ಅವರು ಟೀಕಿಸುವಂತಿಲ್ಲ. ಆಯುರ್ವೇದವೇ ಗುಣಪಡಿಸುತ್ತದೆ ಎಂಬುದಕ್ಕೆ
ಏನು ಖಾತ್ರಿ ಇದೆ? ಅವರ ಎಲ್ಲಾ ಜಾಹಿರಾತುಗಳು ಅಲೋಪತಿ ವೈದ್ಯರನ್ನು ಹಂತಕರು ಎಂದೇ
ಆರೋಪಿಸುತ್ತದೆ. ಅವರು ಆ ರೀತಿ ವೈದ್ಯರು ಹಾಗೂ ವ್ಯವಸ್ಥೆಯನ್ನು ಟೀಕಿಸುವಂತಿಲ್ಲ ಎಂದು
ಸಿಜೆಐ ಹೇಳಿದ್ದಾರೆ.
ದೇಶಾದ್ಯಂತ ಅಲೋಪತಿ ವೈದ್ಯಕೀಯ ಪದ್ಧತಿ, ಲಸಿಕೆ ಅಭಿಯಾನದ ವಿರುದ್ಧ ಸೆಮಿನಾರ್ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಐಎಂಎ ಬಾಬಾ ರಾಮ್ ದೇವ್ ವಿರುದ್ಧ ಆರೋಪಿಸಿತ್ತು. ಆಯುಷ್ ನ್ನು ಉತ್ತೇಜಿಸಲು ಅಲೋಪತಿ ವ್ಯವಸ್ಥೆಯನ್ನು ಅವಹೇಳನ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ, ಎಎಸ್ ಸಿಐ, ಸಿಸಿಪಿಎಗೆ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಹಾಗೂ ಪತಂಜಲಿ ಆಯುರ್ವೇದಕ್ಕೆ ಸಿಜೆಐ ಅವರಿದ್ದ ಪೀಠ ನೊಟೀಸ್ ಜಾರಿಗೊಳಿಸಿದೆ.