ಕಾಞಂಗಾಡ್ : ದುರ್ಗಾ ಹೈಯರ್ ಸೆಕೆಂಡರಿ ಶಾಲೆಯು ಜನಮೈತ್ರಿ ಪೆÇಲೀಸ್ ಕಾಞಂಗಾಡ್ ಮತ್ತು ನೀಲೇಶ್ವರಂ ಟೌನ್ ಲಯನ್ಸ್ ಕ್ಲಬ್ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಹರ್ ಘರ್ ತ್ರಿವರ್ಣ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ರ್ಯಾಲಿ ನಡೆಸಿತು.
ನೀಲೇಶ್ವರಂ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ. ರಮೇಶ್ ಕುಮಾರ್ ಅವರು 100 ರಾಷ್ಟ್ರಧ್ವಜಗಳನ್ನು ಶಾಲಾ ಪ್ರಾಂಶುಪಾಲರಾದ ಕೆ.ಅನಿತಾ ಮತ್ತು ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಮೇಳೋತ್ ಅವರಿಗೆ ಹಸ್ತಾಂತರಿಸಿದರು. ರಾಲಿ ಸಬ್ ಕಲೆಕ್ಟರ್ ಡಿ.ಆರ್. ಮೇಘಶ್ರೀ ಫ್ಲ್ಯಾಗ್ ಆಫ್ ಮಾಡಿದರು. ಶಾಲೆಯ ಸಮೀಪದ ಮನೆಗಳಿಗೆ ರಾಷ್ಟ್ರಧ್ವಜ ವಿತರಿಸಲಾಯಿತು. ನಗರದಲ್ಲಿ ಸ್ವಾತಂತ್ಯ ದ ಅಮೃತ ಮಹೋತ್ಸವದ ಪ್ರಾಧಾನ್ಯವನ್ನು ಸಾರುವ ಫ್ಲಾಶ್ ಮೋಬ್ ಗೆ ಶಾಲಾ ವಿದ್ಯಾರ್ಥಿಗಳಿಂದ ನಡೆಯಿತು.
ಪರಿಸರ ಹೋರಾಟಗಾರ ಪಿ.ಮುರಳೀಧರನ್ ಮಾತನಾಡಿದರು. ಹೊಸದುರ್ಗ ಪೆÇಲೀಸ್ ಠಾಣೆ ಆವರಣದಲ್ಲಿ ಜನಮೈತ್ರಿ ಪೆÇಲೀಸರ ಪರವಾಗಿ ಸಿಐ ಕೆ.ಶೈನ್ ರಾಷ್ಟ್ರಧ್ವಜ ಸ್ವೀಕರಿಸಿದರು. ಕಾಞಂಗಾಡ್ ಅಗ್ನಿಶಾಮಕ ಠಾಣೆ ಸಹಾಯಕ. ಠಾಣಾಧಿಕಾರಿ ಕೆ.ಸತೀಶ್ ಉಪಸ್ಥಿತರಿದ್ದರು. ಬಸ್ ನಿಲ್ದಾಣಕ್ಕೆ ತಲುಪಿದ ರ್ಯಾಲಿಯನ್ನು ಉದ್ದೇಶಿಸಿ ಕಾಞಂಗಾಡ್ ಡಿವೈಎಸ್ ಪಿ ಪಿ.ಬಾಲಕೃಷ್ಣನ್ ಮಕ್ಕಳೊಂದಿಗೆ ಮಾತನಾಡಿದರು. ರ್ಯಾಲಿಯು ನಗರದಾದ್ಯಂತ ಸಂಚರಿಸಿ ಶಾಲಾ ಆವರಣದಲ್ಲಿ ಸಮಾರೋಪಗೊಂಡಿತು. ಎನ್‍ಸಿಸಿ, ಎಸ್‍ಪಿಸಿ, ಸ್ಕೌಟ್ & ಗೈಡ್, ರೆಡ್‍ಕ್ರಾಸ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ವಿಜಯ ಕೃಷ್ಣ ಮಾಸ್ಟರ್,ಹರಿಮುರಳಿ ಮಾಸ್ಟರ್, ಗೋಪಿಕೃಷ್ಣ ಮಾಸ್ಟರ್ ಮೊದಲಾದವರು ನೇತೃತ್ವ ನೀಡಿದರು. ನಂತರ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟ ಸೆಮಿನಾರ್ ಜರಗಿತು. ಜಿಲ್ಲಾ ಮಾಹಿತಿ ಕಚೇರಿಯ ಸಹಯೋಗದೊಂದಿಗೆ ನಡೆದ ವಿಚಾರ ಸಂಕಿರಣವನ್ನು ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂಧನ್ ಉದ್ಘಾಟಿಸಿದರು. ಶಾಲಾ ವ್ಯವಸ್ಥಾಪಕ ವೇಣುಗೋಪಾಲನ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಸಿ.ಬಾಲನ್ ವಿಚಾರ ಸಂಕಿರಣ ಪ್ರಬಂಧ ಮಂಡನೆ ಮಾಡಿದರು. ಶಾಲಾ ಪ್ರಾಂಶುಪಾಲರು ಪಿ. ಅನಿತಾ, ಮುಖ್ಯಶಿಕ್ಷಕ ವಿನೋದ್ ಕುಮಾರ್ ಮೆಲೋತ್, ಜಯನ್ ವೆಳ್ಳಿಕೋತ್ ಮಾತನಾಡಿದರು. ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.