ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ದೇವಸ್ಥಾನದ ನವೀಕರಣ ಕಾರ್ಯದ ಅಂಗವಾಗಿ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿರುವ ನೈವೇದ್ಯ ಪ್ರಕೋಷ್ಠವನ್ನು ಸೋಮವಾರ ಶ್ರೀದೇವರಿಗೆ ಸಮರ್ಪಿಸಲಾಯಿತು. ದೇವಸ್ಥಾನದ ತಂತ್ರಿವರ್ಯ ದೇರೆಬೈಲ್ ಶಿವಪ್ರಸಾದ ತಂತ್ರಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಿತು.
ಬೆಳಗ್ಗೆ ಚತುರ್ನಾಳಿಕೇರ ಅಷ್ಟದ್ರವ್ಯ ಗಣಪತಿ ಯಾಗ, ನೂತನ ನೈವೇದ್ಯ ಪ್ರಕೋಷ್ಠ ಸಮರ್ಪಣೆ, ಅಗ್ನಿಪ್ರತಿಷ್ಠೆ, ಹಾಲುಕ್ಕಿಸಿದ ನಂತರ ಶ್ರೀ ದೇವರಿಗೆ ಪ್ರಸನ್ನ ಪೂಜೆ ನಡೆಯಿತು. ಈ ಸಂದರ್ಭ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ಪವಿತ್ರಪಾಣಿ ರತನ್‍ಕುಮಾರ್ ಕಾಮಡ, ಡಾ. ಬಿ.ಎಸ್.ರಾವ್, ಜಯದೇವ ಖಂಡಿಗೆ, ದೇವಸ್ಥಾನದ ಮುಖ್ಯ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ, ಕುಂಟಾರು ರವೀಶ ತಂತ್ರಿ ಮುಂತಾದವರು ಉಪಸ್ಥಿತರಿದ್ದರು.
ಭಾನುವಾರ ಶಿಲ್ಪಿ ಮರ್ಯಾದೆ, ನೂತನ ನೈವೇದ್ಯ ಪ್ರಕೋಷ್ಠ ಸಂಗ್ರಹ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಆಸ್ತುಬಲಿ, ರಕ್ಷೆ ನಡೆಯಿತು.
ಮಧೂರು ಕ್ಷೇತ್ರ ನವೀಕರಣ ಕಾರ್ಯ: ನೈವೇದ್ಯ ಪ್ರಕೋಷ್ಠ ಸಮರ್ಪಣಾ ಕಾರ್ಯಕ್ಕೆ ಚಾಲನೆ
0
ಆಗಸ್ಟ್ 30, 2022