ಬದಿಯಡ್ಕ: ವ್ಯಾಪಾರಿ ದಿನದ ಆಚರಣೆ ಪ್ರಯುಕ್ತ ನೀರ್ಚಾಲು ವ್ಯಾಪಾರ ಭವನದಲ್ಲಿ ನೂತನ ವಾಗಿ ಸ್ಥಾಪಿಸಿದ ಧ್ವಜ ಸ್ತಂಭದ sಉದ್ಘಾಟನೆ ಹಾಗೂ ಧ್ವಜಾರೋಹಣ ಮಂಗಳವಾರ ನಡೆಯಿತು.
ಘಟಕದ ಅಧ್ಯಕ್ಷ ಎಂ. ಸುಬ್ರಹ್ಮಣ್ಯ ಭಟ್ ಧ್ವಜಾರೋಹಣಗೈದು ಧ್ವಜಸ್ತಂಭ ಉದ್ಘಾಟಿಸಿದರು.
ಘಟಕದ ಉಪಾಧ್ಯಕ್ಷ ಸತ್ಯಶಂಕರ ಭಟ್ ಶುಭಹಾರೈಸಿದರು. ಘಟಕದ ಪ್ರಧಾನ ಕಾರ್ಯದರ್ಶಿ ರವಿ ನೀರ್ಚಾಲು ಸ್ವಾಗತಿಸಿ, ಖಜಾಂಜಿ ಪ್ರಶಾಂತ್ ಪೈ ವಂದಿಸಿದರು. ಮಧ್ಯಾಹ್ನ ಕನ್ಯಪ್ಪಾಡಿ ಆಶ್ರಮಕ್ಕೆ ಘಟಕದ ವತಿಯಿಂದ ಭೋಜನ ವ್ಯವಸ್ಥೆ ಮಾಡಲಾಯಿತು. ಆಶ್ರಮ ಕಾರ್ಯಕ್ರಮಕ್ಕೆ ಬದಿಯಡ್ಕ ಪೋಲೀಸ್ ಠಾಣಾಧಿಕಾರಿಗಳು, ಹಾಗೂ ಅರೋಗ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.