HEALTH TIPS

ಸ್ವತಂತ್ರ ದೇಶವೆಂದರೆ ಇದು: ವಿದೇಶಾಂಗ ಸಚಿವ ಜೈಶಂಕರ್ ವಿಡಿಯೋ ತೋರಿಸಿ ಮತ್ತೆ ಭಾರತ ಕೊಂಡಾಡಿದ ಇಮ್ರಾನ್ ಖಾನ್

        

            ಇಸ್ಲಾಮಾಬಾದ್: ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಘಿಸಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಜೈಶಂಕರ್ ವಿಡಿಯೋ ತೋರಿಸಿ ಮತ್ತೆ ಭಾರತವನ್ನು ಕೊಂಡಾಡಿದ್ದಾರೆ.

                 "ಪಾಕಿಸ್ತಾನದ ಸಂದರ್ಭದಲ್ಲಿಯೇ ಭಾರತ ಸ್ವಾತಂತ್ರ್ಯ ಪಡೆದಿದ್ದಾಗ, ಹೊಸದಿಲ್ಲಿಯು ದೃಢವಾಗಿ ನಿಂತು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ವಿದೇಶಾಂಗ ನೀತಿಯನ್ನು ರೂಪಿಸಲು ಸಾಧ್ಯವಾಗುವುದಾದರೆ, ದಾರಿ ತಪ್ಪುತ್ತಿರುವ ಅವರು (ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರ) ಯಾರು?". ರಷ್ಯಾದಿಂದ ತೈಲ ಖರೀದಿಸದಂತೆ ಭಾರತಕ್ಕೆ ಅಮೆರಿಕ ಆದೇಶ ನೀಡಿತ್ತು. ಭಾರತವು ಅಮೆರಿಕ ಕಾರ್ಯತಂತ್ರ ಮಿತ್ರ ದೇಶ. ಪಾಕಿಸ್ತಾನ ಅಲ್ಲ. ಆದರೆ ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಅಮೆರಿಕ ಸೂಚಿಸಿದಾಗ ಭಾರತದ ವಿದೇಶಾಂಗ ಸಚಿವರು ಹೇಳಿದ್ದೇನು ನೋಡಿ ಎಂದು ಎಸ್ ಜೈಶಂಕರ್ ಅವರ ವಿಡಿಯೋ ತುಣುಕನ್ನು ಹಂಚಿಕೊಂಡಿದ್ದಾರೆ.

                 ಈ ವಿಡಿಯೋದಲ್ಲಿ ನೀವು ಯಾರು ಎಂದು ಜೈಶಂಕರ್ ಪ್ರಶ್ನಿಸುತ್ತಾರೆ. ರಷ್ಯಾದಿಂದ ಯುರೋಪ್ ಅನಿಲ ಖರೀದಿ ಮಾಡುತ್ತಿದೆ. ನಮ್ಮ ಜನರಿಗೆ ಅಗತ್ಯ ಇರುವುದರಿಂದ ನಾವೂ ಖರೀದಿ ಮಾಡುತ್ತೇವೆ ಎಂದು ಜೈಶಂಕರ್ ಹೇಳುತ್ತಾರೆ. ಇದೇ ವಿಡಿಯೋ ತೋರಿಸಿ ಇಮ್ರಾನ್ ಖಾನ್, ಸ್ವತಂತ್ರ ದೇಶವೆಂದರೆ ಇದು" ಎಂದು ಭಾರತವನ್ನು ಕೊಂಡಾಡಿದ್ದಾರೆ. ಅಂತೆಯೇ ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ಒತ್ತಡಕ್ಕೆ ತಲೆಬಾಗಿದ ಶೆಹಬಾಜ್ ಷರೀಫ್ ಸರ್ಕಾರವನ್ನು ಇಮ್ರಾನ್ ಖಾನ್ ಟೀಕಿಸಿದ್ದಾರೆ.

               "ರಷ್ಯಾದಿಂದ ಅಗ್ಗದ ತೈಲ ಖರೀದಿಗಾಗಿ ನಾವು ರಷ್ಯಾ ಜತೆ ಮಾತುಕತೆ ನಡೆಸಿದ್ದೆವು. ಆದರೆ ಅಮೆರಿಕದ ಒತ್ತಡಕ್ಕೆ ಇಲ್ಲ ಎನ್ನುವ ಧೈರ್ಯ ಈ ಸರ್ಕಾರಕ್ಕೆ ಇಲ್ಲ. ಇಂಧನ ದರಗಳು ಗಗನಕ್ಕೆ ಏರುತ್ತಿವೆ. ಜನರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ. ನಾನು ಗುಲಾಮಗಿರಿಯ ವಿರುದ್ಧವಿದ್ದೇನೆ ಎಂದು ಹೇಳಿದ್ದಾರೆ. 

              ಇಮ್ರಾನ್ ಖಾನ್ ಅವರು ಭಾರತವನ್ನು ಹೊಗಳುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ತಾವು ಅಧಿಕಾರ ಕಳೆದುಕೊಳ್ಳುವ ಸನ್ನಿವೇಶ ಸೃಷ್ಟಿಯಾದ ಸಂದರ್ಭದಿಂದಲೂ ಅವರು ಭಾರತ ಮತ್ತು ಅದರ ವಿದೇಶಾಂಗ ನೀತಿಯನ್ನು ಪಾಕಿಸ್ತಾನದ ನೀತಿ ಜತೆ ಹೋಲಿಸಿ ಹೊಗಳುತ್ತಿದ್ದಾರೆ.

Former Pak PM Imran Khan plays out video clip of India's foreign minister Dr S Jaishankar during his mega Lahore Rally on Saturday, pointing out his remarks how India is buying Russian oil despite western pressure. Says, 'yeh hoti hai Azad Haqumat'

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries