ಮುಳ್ಳೇರಿಯ: ನವದೆಹಲಿಯಲ್ಲಿ ಸೆಪ್ಟೆಂಬರ್ 19 ರಿಂದ 24ರ ವರೆಗೆ ನಡೆಯಲಿರುವ 9ನೇಯ ಅಂತಾರಾಷ್ಟ್ರೀಯ ಒಪ್ಪಂದದ ಅಧಿವೇಶನದಲ್ಲಿ 2022 ಸಸ್ಯತಳಿಗಳ(ಭತ್ತದ) ಪ್ರದರ್ಶನಕ್ಕೆ ಕಾಸರಗೋಡು ಮುಳ್ಳೇರಿಯದ ಸತ್ಯನಾರಾಯಣ ಬೇಳೇರಿಯವರಿಗೆ ಅವಕಾಶ ನೀಡಲಾಗಿದೆ.
ಸುಮಾರು 650 ಕ್ಕಿಂತಲೂ ಅಧಿಕ ಭತ್ತದ ಸಾಂಪ್ರದಾಯಿಕ ತಳಿಗಳನ್ನು ತನ್ನದೇ ಮಾದರಿಯಲ್ಲಿ ಬೆಳೆದು ಆಸಕ್ತರಿಗೆ, ವಿದ್ಯಾರ್ಥಿಗಳಿಗೆ, ಕೃಷಿ ವಿಶ್ವವಿದ್ಯಾಲಯಗಳಿಗೆ ಹಂಚುತ್ತಿರುವ ಸತ್ಯನಾತರಾಯಣ ಬೆಳೇರಿಯವರೀಗೆ ಕಳೆದ ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರ ರೈತರ ಮಟ್ಟದಲ್ಲಿ ಕೊಡಮಾಡುವ ಉನ್ನತ ಪ್ರಶಸ್ತಿಯಾದ(ಪ್ಲಾಂಟ್ ಜಿನೊಮ್ ಕ್ಸೇವಿಯರ್ ಪೆÇೀರ್ಮರ್ ರಿವಾರ್ಡ್) ಸಸ್ಯತಳಿ ಸಂರಕ್ಷಕ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಮಾನದಂಡದ ಆಧಾರದಲ್ಲಿ ಇದೀಗ ಈ ಅವಕಾಶ ನೀಡಲಾಗಿದೆ.ಕಳೆದ ಸಲದ ಪ್ರಶಸ್ತಿ ಈಗ ಅವಕಾಶ ಪಡೆದಿರುವ ಜಿಲ್ಲೆಯ ಮೊದಲಿಗರಾಗಿದ್ದಾರೆ.
ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸಸ್ಯತಳಿ ಪ್ರದರ್ಶನಕ್ಕೆ ಸತ್ಯನಾರಾಯಣ ಬೇಳೇರಿಯವರಿಗೆ ಅವಕಾಶ
0
ಆಗಸ್ಟ್ 21, 2022