ನವದೆಹಲಿ: ಹವಾಮಾನ ಬದಲಾವಣೆಯಿಂದಾಗಿ ಹವಾಮಾನ ಮುನ್ಸೂಚನೆ ಕಷ್ಟಸಾಧ್ಯವಾಗುತ್ತಿದೆ ಎಂದು ಐಎಂಡಿ ಡಿಜಿ ಹೇಳಿದ್ದಾರೆ.
ಹವಾಮಾನ ಮುನ್ಸೂಚನೆಯ ನಿಖರತೆಗೆ ಹವಾಮಾನ ಬದಲಾವಣೆ ಪೆಟ್ಟು ನೀಡುತ್ತಿದ್ದು, ಇನ್ನಷ್ಟು ನಿಖರಗೊಳಿಸಲು ಜಾಗತಿಕ ಮಟ್ಟಾದಲ್ಲಿ ವೀಕ್ಷಣಾ ಜಾಲದ ಸಾಂದ್ರತೆ ಮತ್ತು ಹವಾಮಾನ ಮುನ್ಸೂಚನೆ ಮಾಡೆಲಿಂಗ್ ಅನ್ನು ಹೆಚ್ಚಿಸುವುದಕ್ಕೆ ಪ್ರಯತ್ನಗಳು ನಡೆಯುತ್ತಿದೆ ಎಂದು ಪ್ರಧಾನ ವ್ಯವಸ್ಥಾಪಕ ಮೃತ್ಯುಂಜಯ ಮಹೋಪಾತ್ರ ಹೇಳಿದ್ದಾರೆ.
ಮುಂಗಾರು ಮಳೆ ದೇಶದಲ್ಲಿ ಮಹತ್ವದ ಟ್ರೆಂಡ್ ನ್ನು ತೋರಿಸಿಲ್ಲವಾದರೂ, ವಾಡಿಕೆಗಿಂತಲೂ ಹೆಚ್ಚಿನ ಮಳೆಯ ಪ್ರಕರಣಗಳು ಏರಿಕೆಯಾಗಿವೆ ಹಾಗೂ ಕಡಿಮೆ ಮಳೆಯ ಪ್ರಕರಣಗಳು ಕುಸಿತ ಕಂಡಿದೆ ಇದು ಹವಾಮಾನ ಬದಲಾವಣೆಯಿಂದಾಗಿದೆ ಎಂದು ಮಹೋಪಾತ್ರ ಹೇಳಿದ್ದಾರೆ.
1901 ರಿಂದ ಮುಂಗಾರು ಮಳೆಗೆ ಸಂಬಂಧಿಸಿದ ಡೇಟಾ ಸಂಗ್ರಹಿಸಿದ್ದೇವೆ. ಉತ್ತರ, ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಕಡಿಮೆ ಪ್ರಮಾಣದ ಮಳೆಯಾಗಿದ್ದರೆ, ಪಶ್ಚಿಮ ಹಾಗೂ ರಾಜಸ್ಥಾನದ ಪ್ರದೇಶಗಳಲ್ಲಿ ಮಳೆ ಏರಿಕೆಯಾಗಿದೆ. ಈ ರೀತಿಯಾಗಿ ದೇಶವನ್ನು ಇಡೀಯಾಗಿ ಪರಿಗಣಿಸಿದರೆ, ಮಹತ್ವದ ಟ್ರೆಂಡ್ ಕಾಣುತ್ತಿಲ್ಲ ಎಂದು ಐಎಂಡಿ ಹೇಳಿದೆ.