ಮುಳ್ಳೇರಿಯ: ಅದೂರು ಸರಕಾರಿ ಹೈಯರ್ ಸೆಕೆಂಡರೀ ಶಾಲೆಯ ಪ್ರೌಢಶಾಲೆಯ ಕನ್ನಡ ಮಾಧ್ಯಮದಲ್ಲಿ ಭೌತ ಶಾಸ್ತ್ರ ಶಿಕ್ಷಕರ ಹುದ್ಧೆಗೆ ಕನ್ನಡ ತಿಳಿಯದ ಶಿಕ್ಷಕರ ನೇಮಕಾತಿಯ ವಿರುದ್ಧ ವಿದ್ಯಾರ್ಥಿಗಳ ತರಗತಿ ಬಹಿಷ್ಕಾರ ಮುಂದುವರಿದಿದ್ದು ಪೋಷಕರು ಮತ್ತು ವಿದ್ಯಾರ್ಥಿಗಳು ಶಿಕ್ಷಣ ಉಪನಿರ್ದೇಶಕರಿಗೆ(ಡಿಡಿಇ) ಮನವಿ ನೀಡಿದ್ದಾರೆ.
ಕಾಸರಗೋಡು ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಆದೇಶದಂತೆ ಕನ್ನಡ ಭಾಷಾ ಪರಿಣತಿ ಇಲ್ಲದ ಶಿಕ್ಷಕರನ್ನು ಆದೂರು ಪ್ರೌಢ ಶಾಲೆಗೆ ಪ್ರಸ್ತುತ ವರ್ಗಾವಣೆಗೊಳಿಸಿದ ಹಿನ್ನೆಲೆಯಲ್ಲಿ ಎರಡನೇ ದಿನವೂ ವಿದ್ಯಾರ್ಥಿಗಳು ತರಗತಿಯನ್ನು ಬಹಿಷ್ಕರಿಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಈ ಶಿಕ್ಷಕರ ವಿe್ಞÁನ ಬೋಧನೆಯು ಮಕ್ಕಳ ಕಲಿಕೆಗೆ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವರನ್ನು ಕೂಡಲೇ ಇಲ್ಲಿಂದ ವರ್ಗಾವಣೆಗೊಳಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಬದಲಿ ನೇಮಕಾತಿ ನಡೆಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಪೋಷಕರು ಮತ್ತು ಕನ್ನಡಾಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ.
ಆದೂರು; ಮಲೆಯಾಳ ಶಿಕ್ಷಕರ ನೇಮಕಾತಿ; ಮುಂದುವರಿದ ತರಗತಿ ಬಹಿಷ್ಕಾರ; ಮೇಲಧಿಕಾರಿಗೆ ಮನವಿ
0
ಆಗಸ್ಟ್ 05, 2022