ಮಂಜೇಶ್ವರ: ಕೇರಳ ತುಳು ಅಕಾಡೆಮಿಯನ್ನು ಪುನರ್ ಸಂಘಟಿಸಿ ಸಂಸ್ಕøತಿ ಇಲಾಖೆ ಆದೇಶ ಹೊರಡಿಸಿದೆ. ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಮೂವರು ಪದನಿಮಿತ್ತ ಸದಸ್ಯರು ಸೇರಿದಂತೆ 17 ಸದಸ್ಯರ ಆಡಳಿತ ಮಂಡಳಿಯನ್ನು ಪ್ರಕಟಿಸಲಾಗಿದೆ. ನೂತನ ಅಧ್ಯಕ್ಷರಾಗಿ ಕೆ.ಆರ್.ಜಯಾನಂದ ಅವರನ್ನು ನಿಯುಕ್ತಿಗೊಳಿಸಲಾಗಿದೆ.
ಕಾಸರಗೋಡು ಸಹಕಾರಿ ಸಹಾಯಕ ನಿಬಂಧಕ ಎ.ರವೀಂದ್ರ ಕಾರ್ಯದರ್ಶಿಯಾಗಿದ್ದಾರೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್, ಸಂಸದ ರಾಜಮೋಹನ್ ಉಣ್ಣಿತ್ತಾನ್ ಮತ್ತು ಶಾಸಕ ಎಕೆಎಂ ಅಶ್ರಫ್ ಅಧಿಕೃತ ಸದಸ್ಯರಾಗಿರುವರು. ನ್ಯಾಯವಾದಿ ಜಿ.ಚಂದ್ರಮೋಹನ್, ಕೃಷ್ಣವೇಣಿ ಟೀಚರ್, ಜೋಸೆಫ್ ಕ್ರಾಸ್ತಾ, ಸಿ.ಕೆ.ಅಜಿತ್ ಚಿಪ್ಪಾರ್, ಉದಯ ಸಾರಂಗ್ ಎಣ್ಮಕಜೆ, ಗಣೇಶ್ ಕಾಂಜವ, ಭುಜಂಗಶೆಟ್ಟಿ, ಎ.ಚಂದ್ರಶೇಖರನ್, ವರ್ಕಾಡಿ ಗ್ರಾ.ಪಂ.ಅಧ್ಯಕ್ಷೆ ಭಾರತಿ ಸುಳ್ಯಮೆ, ಪೈವಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ, ಅಬ್ದುಲ್ಲ ಪೈವಳಿಗೆ, ಗಂಗಾಧರನ್ ಸದಸ್ಯರಾಗಿದ್ದಾರೆ.