ಕಾಸರಗೋಡು: ಬಿಜೆಪಿ ಜಿಲ್ಲಾ ಘಟಕದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ವಿವಿಧ ಕಾರ್ಯಕ್ರಮದನ್ವಯ ಮಹಿಳಾ ಮೋರ್ಚಾ ವತಿಯಿಂದ ಗುರುವಾರ ದ್ವಿಚಕ್ರ ವಾಹನಗಳಲ್ಲಿ ತಿರಂಗ ಯಾತ್ರೆ ನಡೆಯಿತು.
ನಗರದ ಶ್ರೀ ಮಲ್ಲಿಕಾರ್ಝುನ ದಏವಸ್ಥಾನ ವಠಾರದಿಂದ ಆರಂಭಗೊಂಡ ತಿರಂಗ ಯಾತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ ಚಾಲನೆ ನೀಡಿದರು. ಬೇಕಲ ವರೆಗೆ ದ್ವಿಚಕ್ರವಾಹನ ತಿರಂಗ ಅಭಿಯಾನ ನಡೆಯಲಿದ್ದು, ಮಹಿಳಾ ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಆ. 12ರ ವರೆಗೆ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ತಿರಂಗ ಅಭಿಯಾನ ಹಾಗೂ 13ರಂದು ಹರಘರ್ ತ್ರಿವರ್ಣ ಧ್ವಜ ಅಭಿಯಾನ ನಡೆಯಲಿರುವುದು.
ಆಜಾದಿ ಕಾ ಅಮೃತ ಮಹೋತ್ಸವ್ : ಮಹಿಳಾ ಮೋರ್ಚಾದಿಂದ ದ್ವಿಚಕ್ರ ವಾಹನಗಳಲ್ಲಿ ತಿರಂಗ ಯಾತ್ರೆ
0
ಆಗಸ್ಟ್ 12, 2022
Tags