ತಿರುವನಂತಪುರ: ತಿರುವನಂತಪುರದ ವಲಿಯತುರ ಠಾಣೆಯಲ್ಲಿ ಪ್ರಿನ್ಸಿಪಿಲ್ ಎಸ್‍ಐ ಮತ್ತು ಕ್ರೈಂ ಎಸ್‍ಐ ಪ್ರಣಯ ಪ್ರಸಗವೊಂದು ಕುತೂಹಲ ಮೂಡಿಸಿದೆ. ಇವರಿಬ್ಬರ ಪ್ರೇಮ ಕಹಾನಿ ಇಬ್ಬರೂ ಸತಿ-ಪತಿಯಾಗಲು ಜಾಮೀನು ಮಂಜೂರು ಮಾಡಿದೆ.
ಅಭಿಲಾಷ್ ಮೋಹನನ್ ಮತ್ತು ಅಪರಾಧ ವಿಭಾಗದ ಎಸ್‍ಐ. ಅಲೀನಾ ಸೈರಸ್ ಈ ಪ್ರೇಮಕಥೆಯ ನಾಯಕ ನಾಯಕಿಯರು. ಕರ್ತವ್ಯದ ವೇಳೆ ಇಬ್ಬರೂ ಹತ್ತಿರವಾದವರು.
ಪ್ರಕರಣಗಳ ತನಿಖೆ ಮತ್ತು ವರದಿಗಳನ್ನು ಸಿದ್ಧಪಡಿಸುವಲ್ಲಿ ಸಾಮ್ಯತೆಗಳು ಅವರನ್ನು ಹತ್ತಿರಕ್ಕೆ ತಂದವು. 2019ರಲ್ಲಿ ಅಭಿಲಾμï ಕರ್ತವ್ಯಕ್ಕೆ ಸೇರ್ಪಡೆಗೊಂಡವರು. ಅಲೀನಾ 2018 ರಲ್ಲಿ ಸೇವೆಗೆ ಸೇರ್ಪಡೆಗೊಂಡವರು. ಅಲೀನಾ ಪತ್ತನಂತಿಟ್ಟ ಠಾಣೆಯಿಂದ ವಲಿಯತುರ ಠಾಣೆಗೆ 219ರಲ್ಲಿ ಬಂಡ್ತಿಗೊಂಡಿದ್ದರು.
ಪೇಯಡ್ ಅಭಿಲಾμï ಭವನದಲ್ಲಿರುವ ಸರ್ಕಾರಿ ಮುದ್ರಣಾಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮೋಹನ್ ಮತ್ತು ಅನಿತಾಕುಮಾರಿ ದಂಪತಿಯ ಪುತ್ರ ಅಭಿಲಾμï. ವೆಟ್ಟೂರ ಅಲೀನಾ ಹೌಸ್‍ನಲ್ಲಿ ಮೀನುಗಾರ ಕುಟುಂಬದ ಸೈರಸ್ ಮತ್ತು ಅಲ್ಫೋನ್ಸಿಯಾ ದಂಪತಿಯ ಪುತ್ರಿ ಅಲೀನಾ. ಅಲೀನಾ ಅವರ ಪ್ರಬುದ್ಧತೆ ಮತ್ತು ಜವಾಬ್ದಾರಿಯುತ ಕರ್ತವ್ಯ ನಿಷ್ಠೆ ಯಿಂದ ಆಕರ್ಷಿತರಾಗಿ ಅಲೀನಾ ಅವರನ್ನು ಜೀವನದ ಭಾಗವಾಗಿಸಬೇಕೆಂದು ಭಾವಿಸಿದೆ ಎಂದು ಅಭಿಲಾಷ್ ಎಸ್‍ಐ ಹೇಳಿರುವರು. ಇದೇ ವೇಳೆ, ಅಭಿಲಾμï ಅವರ ಪ್ರಾಮಾಣಿಕತೆ ಮತ್ತು ಕೆಲಸದ ಬಗ್ಗೆ ಸಕಾರಾತ್ಮಕ ಮನೋಭಾವದಿಂದ ತಾನು ಆಕರ್ಷಿತಳಾದೆ ಎಂದೂ ಅಲೀನಾ ಸ್ಪಷ್ಟಪಡಿಸಿದ್ದಾರೆ.
ಒಂದು ಪೋಲೀಸ್ ಠಾಣೆ ಲವ್ ಸ್ಟೋರಿ; ಹಸೆಮಣೆಯೇರಿದ ಎಸ್.ಐ ಗಳು
0
ಆಗಸ್ಟ್ 28, 2022
Tags