ಪೆರ್ಲ: ಮಣಿಯಂಪಾರೆ ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರ ದುರ್ಗಾನಗರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಜರಗಿತು. ಇದರ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯ ಕುಂಞಣ್ಣ ಮಾಸ್ತರ್ ನೆಕ್ಕರೆಪದವು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಂದಿರದ ಕಾಣಿಕೆ ಹುಂಡಿಯನ್ನು ಗೋಪಾಲಕೃಷ್ಣ ಭಟ್ ಬಿಡುಗಡೆಗೊಳಿಸಿದರು. ಮಂದಿರದ ಅಧ್ಯಕ್ಷ ಆನಂದ ನಾಯ್ಕ ಅರೆಮಂಗಿಲ ಅಧ್ಯಕ್ಷತೆವಹಿಸಿದ್ದರು.ಬಳಿಕ ಮಕ್ಕಳ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ವಿವಿಧ ಕ್ರೀಡಾ ಕಾರ್ಯಕ್ರಮಗಳು ಜರಗಿದವು. ಸ್ಪರ್ಧಾ ವಿಜೇತರಿಗೆ ಕಂದಲ್ ಎಎಲ್ ಪಿ ಶಾಲಾ ಮುಖ್ಯೋಪಾಧ್ಯಾಯ ಉಣ್ಣಿಕೃಷ್ಣ ಮಾಸ್ತರ್ ಬಹುಮಾನ ವಿತರಿಸಿದರು. ಮಂದಿರದ ಸ್ಥಾಪಕ ಸದಸ್ಯ ಗೋವಿಂದ ನಾಯ್ಕ್ ಅರೆಮಂಗಿಲ, ಕುಂಞಣ್ಣ ಮಾಸ್ತರ್,ಅನಂದ ಮೊದಲಾದವರು ಉಪಸ್ಥಿತರಿದ್ದರು. ಡಾ.ಸಂಧ್ಯಾಕುಮಾರಿ ಸ್ವಾಗತಿಸಿ ಚೈತ್ರ ಅರೆಮಂಗಿಲ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಮಕ್ಕಳ ನೃತ್ಯ ವೈವಿಧ್ಯ,ನವಶಕ್ತಿ ಪೆÇ್ರಡಕ್ಷನ್ ನಿರ್ಮಿಸಿ ಸ್ಥಳೀಯ ಪ್ರತಿಭೆಗಳು ಅಭಿನಯಿಸಿದ "ವನ ಮೋಹಿನಿ" ಎಂಬ ಕಿರುಚಿತ್ರ ಪ್ರದರ್ಶನಗೊಂಡು ಜನ ಮನ ಸೂರೆಗೊಂಡಿತು.ಬಳಿಕ ಮಂದಿರ ಸದಸ್ಯರಿಂದ ವಸಂತ ಎನ್.ಮಣಿಯಂಪಾರೆ ರಚಿಸಿ ಜಯಚಂದ್ರ ನಿರೋಳ್ಯ ನಿರ್ದೆಶನದಲ್ಲಿ "ಬದ್ಕ್ ಒಂಜಿ ಕನ" ಎಂಬ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಮಣಿಯಂಪಾರೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೈವಿಧ್ಯಮ ಕಾರ್ಯಕ್ರಮ
0
ಆಗಸ್ಟ್ 21, 2022