ಬದಿಯಡ್ಕ: ವಿಶ್ವಛಾಯಾಗ್ರಾಹಕರ ದಿನಾಚರಣೆಯ ಅಂಗವಾಗಿ ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಬದಿಯಡ್ಕ ಘಟಕದ ವತಿಯಿಂದ ಸೀತಾಂಗೋಳಿ ಮುಖಾರಿಕಂಡ ಅಂಗನವಾಡಿಗೆ ಸೀಲಿಂಗ್ ಫೇನ್, ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಅಂಗನವಾಡಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬದಿಯಡ್ಕ ಘಟಕದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ ಅಧ್ಯಕ್ಷತೆ ವಹಿಸಿದ್ದರು. ಎಕೆಪಿಎ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ವಿಜಯನ್ ಉಪ್ಪಳ, ಕುಂಬಳೆ ವಲಯ ಅಧ್ಯಕ್ಷ ಸುನಿಲ್ ಮಂಜೇಶ್ವರ, ಕೋಶಾಧಿಕಾರಿ ವೇಣುಗೋಪಾಲ ನೀರ್ಚಾಲು, ಬದಿಯಡ್ಕ ಘಟಕದ ಕಾರ್ಯದರ್ಶಿ ಶ್ಯಾಮಪ್ರಸಾದ ಸರಳಿ, ಕೋಶಾಧಿಕಾರಿ ಬಾಲಕೃಷ್ಣ ನಿಡುಗಳ, ಅಂಗನವಾಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ ಕೋಡಿಮೂಲೆ, ಉಪ್ಪಳ ಘಟಕ ಕಾರ್ಯದರ್ಶಿ ಸಂದೇಶ್ ಐಲ, ಛಾಯಾಗ್ರಾಹಕರಾದ ಉದಯ ಮೈಕುರಿ, ಮುರಳಿ ತಲ್ಪಣಾಜೆ ಪಾಲ್ಗೊಂಡಿದ್ದರು. ಅಂಗನವಾಡಿ ಅಧ್ಯಾಪಕಿ ಸುನಂದ ಸೀತಾಂಗೋಳಿ ಸ್ವಾಗತಿಸಿ, ಸಹಾಯಕಿ ಮೈಮೂನ ಕಟ್ಟತ್ತಡ್ಕ ವಂದಿಸಿದರು.