ತಿರುವನಂತಪುರ: ದೇಶವು 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿರುವಂತೆಯೇ ತಿರುವನಂತಪುರ ಸಂಸ್ಕೃತ ಕಾಲೇಜಿನ ಗೋಡೆಗಳು ವಿಭಿನ್ನ ಸಂದೇಶವನ್ನು ಸಾರಿವೆ.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಸಂಸ್ಕೃತ ಕಾಲೇಜಿನ ಗೋಡೆಗಳ ಮೇಲೆ ಮಹಾತ್ಮ ಅಯ್ಯಂಕಾಳಿ ಅವರ ಚಿತ್ರ ಬಿಡಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ಸಾರಿದ್ದಾರೆ.
ಚಿತ್ರವು ಮಹಾತ್ಮ ಅಯ್ಯಂಗಾಳಿಯವರ ಜೀವನ ಹೋರಾಟಗಳು ಮತ್ತು ಅವರು ನೇತೃತ್ವದ ಅಟ್ಟಿಂಗಲ್ ಗಲಭೆಗಳನ್ನು ಬಿಂಬಿಸಿದೆ. ಕಾಲೇಜಿನ ಮುಖ್ಯ ದ್ವಾರದ ಮೇಲೆ ಬಿಡಿಸಿದ ಚಿತ್ರದಲ್ಲಿ ಅಯ್ಯಂಕಾಳಿ ಜತೆಗೆ ಸಮಾಜ ಪರಿವರ್ತನೆಯ ಸಂಕೇತವಾದ ಪಂಚಮಿಯೂ ಸೇರಿದೆ. ನ್ಯಾಯ ನಿರಾಕರಿಸಿದ ಸಂದರ್ಭದಲ್ಲಿ ಶಿಕ್ಷಣದ ಹಕ್ಕಿಗಾಗಿ ಸ್ಲೇಟು ಹಿಡಿದು ನಿಂತಿರುವ ಪಂಚಮಿಯ ಜೊತೆಯಲ್ಲಿ ಮಹಾತ್ಮ ಅಯ್ಯಂಕಾಳಿ ನಿಂತಿರುವ ವೈಭವದ ಚಿತ್ರವನ್ನು ಕಾಲೇಜು ಗೋಡೆಯಲಲಿ ಬಿಡಿಸಲಾಗಿದೆ. ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ 64 ಸರ್ಕಾರಿ ಕಾಲೇಜುಗಳಲ್ಲಿ ಈ ಯೋಜನೆ ಜಾರಿಯಾಗಲಿದೆ.
ಆಜಾದಿ ಕಾ ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೇರಳದ ಉನ್ನತ ಶಿಕ್ಷಣ ಇಲಾಖೆ ಆರಂಭಿಸಿರುವ ಸ್ವಾತಂತ್ರ್ಯ ಗೋಡೆ ಯೋಜನೆಯ ಭಾಗವಾಗಿ ತ್ರಿಪುಣಿತುರಾ ಆರ್‍ಎಲ್‍ವಿ ಕಾಲೇಜಿನ ವಿದ್ಯಾರ್ಥಿಗಳು ಈ ಚಿತ್ರವನ್ನು ಬಿಡಿಸಿದ್ದಾರೆ. ಗೋಡೆಗಳು ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಮತ್ತು ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳಿಂದ ತುಂಬಿವೆ. ಕೇರಳದ ಪುನರುಜ್ಜೀವನ ಚಳವಳಿಯ ಭಾಗವಾಗಿ ಅನೇಕ ಸಮಾಜ ಸುಧಾರಕರು ತಮ್ಮ ಹಕ್ಕುಗಳಿಗಾಗಿ ಹೋರಾಡಿದ ನೆಲ ಕೇರಳ. ಅಯ್ಯಂಕಾಳಿ ಸೇರಿದಂತೆ ಹೋರಾಟದ ವೀರರ ಭಾವಚಿತ್ರವನ್ನು ಹೊಸ ಪೀಳಿಗೆಗೆ ಅವರ ಕೊಡುಗೆಗಳ ಆತ್ಮಾರ್ಪಣೆಯ ನೆನಪುಗಳನ್ನು ತಿಳಿಸುವ ಉದ್ದೇಶದಿಂದ ಅವರ ಭಾವಚಿತ್ರಗಳನ್ನು ಬಿಡಿಸಲಾಗಿದೆ ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ. ಕೆ ಕೇಳಪ್ಪನ್, ಕುಮಾರನಾಶಾನ್, ಪಂಡಿತ್ ಕರುಪ್ಪನ್ ಮತ್ತು ಇನ್ನೂ ಅನೇಕರ ಚಿತ್ರಗಳು ಕಾಲೇಜಿನ ಗೋಡೆಗಳ ಮೇಲೆ ಇವೆ.
ಆಜಾದಿ ಕಾ ಅಮೃತ ಮಹೋತ್ಸವ: ಸಂಸ್ಕøತ ಕಾಲೇಜಿನ ಗೋಡೆಗಳ ಮೇಲೆ ವಿದ್ಯಾರ್ಥಿಗಳಿಂದ ಮಹಾತ್ಮ ಅಯ್ಯಂಕಾಳಿ ಭಾವಚಿತ್ರ
0
ಆಗಸ್ಟ್ 10, 2022