ಬದಿಯಡ್ಕ: ಶ್ರೀಮದ್ ಎಡನೀರು ಮಠದಲ್ಲಿ ನಡೆಯುತ್ತಿರುವ ಶ್ರೀ ಸಚ್ಚಿದಾಂದ ಭಾರತೀ ಶ್ರೀಗಳ ಚಾತುರ್ಮಾಸ್ಯ ವ್ರತಾನುಷ್ಠಾನದ ಅಂಗವಾಗಿ ಆಯೋಜಿಸಿರುವ ಸಾಂಸ್ಕøತಿಕ ಕಾರ್ಯಕ್ರಮದ ಭಾಗವಾಗಿ ಸೋಮವಾರ ಕಾಸರಗೋಡಿನ ಶ್ರೀಗೋಪಾಲಕೃಷ್ಣ ಸಂಗೀತ ಕಲಾಶಾಲೆಯ ವಿದುಷಿಃ ಉಷಾ ಈಶ್ವರ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನೆರೆದವರನ್ನು ಮಂತ್ರಮುಗ್ದಗೊಳಿಸಿತು. ಸಂಗೀತ ಕಚೇರಿಯ ಪಕ್ಕವಾದ್ಯದಲ್ಲಿ ವಿದ್ವಾನ್ ಗಣರಾಜ ಕಾರ್ಲೆ(ಪಿಟೀಲು), ವಿದ್ವಾನ್ ಅನಿಲ್ ಕುಮಾರ್ ವಡಗರ(ಮೃದಂಗ), ವಿದ್ವಾನ್ ಬಿ.ಜಿ.ಈಶ್ವರ ಭಟ್ ಕಾಸರಗೋಡು(ಘಟಂ), ವಿದ್ವಾನ್ ರಾಜೀವ ಗೋಪಾಲ್ ವೆಳ್ಳಿಕ್ಕೋತ್(ಮೋರ್ಸಿಂಗ್)ನಲ್ಲಿ ಸಹಕರಿಸಿದರು.
ಎಡನೀರಲ್ಲಿ ಶಾಸ್ತ್ರೀಯ ಸಂಗೀತ ಕಚೇರಿ
0
ಆಗಸ್ಟ್ 10, 2022