HEALTH TIPS

ರಫೇಲ್ ಒಪ್ಪಂದ: ಹೊಸ ತನಿಖೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

            ವದೆಹಲಿ:ಒಪ್ಪಂದದ ಮೇಲೆ ಪ್ರಭಾವ ಬೀರಲು ಡಸಾಲ್ಟ್ ಏವಿಯೇಷನ್ ಸಂಸ್ಥೆಯು ​​ಭಾರತೀಯ ಮಧ್ಯವರ್ತಿಗೆ ಲಕ್ಷಾಂತರ ಯೂರೋಗಳನ್ನು ಪಾವತಿಸಿದೆ ಎಂದು ಫ್ರೆಂಚ್ ಪೋರ್ಟಲ್ ಕಳೆದ ವರ್ಷ ವರದಿ ಮಾಡಿದ ನಂತರ ರಫೇಲ್ ಯುದ್ಧ ವಿಮಾನ ಖರೀದಿಯ (Rafale fighter jets procurement)ಬಗ್ಗೆ ಹೊಸ ತನಿಖೆಗೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL)ಯನ್ನು ಸುಪ್ರೀಂ ಕೋರ್ಟ್ (Supreme Court)ಸೋಮವಾರ ವಜಾಗೊಳಿಸಿದೆ ಎಂದು Live Law ವರದಿ ಮಾಡಿದೆ.

            ಫ್ರೆಂಚ್ ವಿಮಾನ ತಯಾರಕರಿಂದ 36 ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ರದ್ದುಗೊಳಿಸಲು ಮನೋಹರ್ ಲಾಲ್ ಶರ್ಮಾ ಎಂಬ ವಕೀಲರು ಸಲ್ಲಿಸಿದ ಮನವಿಯಲ್ಲಿ ನ್ಯಾಯಾಲಯದ ನಿರ್ದೇಶನಗಳನ್ನು ಕೋರಲಾಗಿದೆ.

             "ಪ್ರತಿಯೊಬ್ಬರೂ ಅಸಹಾಯಕರಾಗುವ ದಿನ ಬರುತ್ತದೆ... ಭ್ರಷ್ಟಾಚಾರವನ್ನು ಪ್ರಶ್ನಿಸಲು ಯಾವುದೇ ಸಂಸ್ಥೆ ಮುಂದೆ ಬರಲಿಲ್ಲ" ಎಂದು ನ್ಯಾಯಾಧೀಶರಿಗೆ ತಮ್ಮ ಮನವಿಯನ್ನು ಪರಿಗಣಿಸುವಂತೆ ಮನವೊಲಿಸಲು ಪ್ರಯತ್ನಿಸುವಾಗ ಶರ್ಮಾ ಹೇಳಿದರು.

                ಆದರೆ, ಕೋರ್ಟ್ ಆದೇಶ ನೀಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ಹಾಗೂ ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಅವರನ್ನೊಳಗೊಂಡ ಪೀಠವು ಹೇಳಿದೆ. ನಂತರ ಶರ್ಮಾ ತಮ್ಮ ಅರ್ಜಿಯನ್ನು ಹಿಂಪಡೆಯುವಂತೆ ಮನವಿ ಮಾಡಿದರು. ಅವರ ಮನವಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿಗಳು ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ವಜಾಗೊಳಿಸಿದರು.

       ಕಳೆದ ವರ್ಷ ಫ್ರೆಂಚ್ ಆನ್‌ಲೈನ್ ಜರ್ನಲ್ Mediapart ಒಪ್ಪಂದದ ಕುರಿತು ಮೂರು ಭಾಗಗಳ ವರದಿಯನ್ನು ಪ್ರಕಟಿಸಿತು. ಭಾರತದಲ್ಲಿನ ಜಾರಿ ನಿರ್ದೇಶನಾಲಯ(ಈಡಿ)ಹಾಗೂ ಫ್ರೆಂಚ್ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಅಕ್ರಮಗಳನ್ನು ಗುರುತಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ವರದಿಗಳು ಹೇಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries