ಪೆರ್ಲ:ಎಣ್ಮಕಜೆ ಗ್ರಾಮಪಂಚಾಯತು ವತಿಯಿಂದ 75ನೇಸ್ವಾತಂತ್ರ್ಯೋತ್ಸವದ ವಾರ್ಷಿಕೋತ್ಸವದ ಅಂಗವಾಗಿ "ಅಜಾದಿಕಾ ಅಮೃತ ಮಹೋತ್ಸವ" ಕಾರ್ಯಕ್ರಮವನ್ನು ಅ.15ರಂದು ಪೆರ್ಲದ ಭಾರತೀ ಸದನದಲ್ಲಿ ವೈವಿಧ್ಯಮಯವಾಗಿ ಆಯೋಜಿಸಲಾಗಿದೆ ಎಂದು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ತಿಳಿಸಿದ್ದಾರೆ.
ಇದರನ್ವಯ ಪ್ರತಿ ಮನೆಗಳಲ್ಲೂ "ಹರ್ ಘರ್ ತಿರಂಗ್" ಅಭಿಯಾನ ಯಶಸ್ವಿಗೊಳಿಸಲು ಕರೆ ನೀಡಲಾಗಿದೆ. ಅ.15ರಂದು ಬೆಳಿಗ್ಗೆ ಪಂಚಾಯತು ಕಚೇರಿ ಪರಿಸರದಲ್ಲಿ ಧ್ವಜಾರೋಹಣ ಬಳಿಕ ವರ್ಣಮಯ ಬೃಹತ್ ಮೆರವಣಿಗೆ ಪೆರ್ಲ ಪೇಟೆಯಲ್ಲಿ ಸಾಗಿ ಪೆರ್ಲದ ಭಾರತೀ ಸಭಾ ಭವನದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಸ್ವಾತಂತ್ರ್ಯ ದಿನಾಚರಣೆ ಸಂಗಮ ಕಾರ್ಯಕ್ರಮ ಜರಗಲಿದೆ.ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ನಾಡಿಗೆ ಕೊಡುಗೆ ನೀಡಿದ ಹಿರಿಯ ಸಾಧಕರಿಗೆ "ಅಜಾದಿಕಾ ಅಮೃತ ಪುರಸ್ಕಾರ ಪ್ರದಾನ", ಪಂಚಾಯತು ವ್ಯಾಪ್ತಿಯಲ್ಲಿ ಎಸ್ಸಸೆಲ್ಸಿ, ಪ್ಲಸುಟು ಹಾಗೂ ಪದವಿಗಳಲ್ಲಿ ಉನ್ನತ ಅಂಕ ಗಳಿಸಿದ ಪಂಚಾಯತು ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಲಿದ್ದು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸುವರು.ಜಿ.ಪಂ.ಹಾಗೂ ಬ್ಲಾಕ್ ಪಂ.ಸದಸ್ಯರು ಮತ್ತು ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರು, ಪಂ.ನ ಎಲ್ಲಾ ವಾರ್ಡ್ ಸದಸ್ಯರು,ವಿವಿಧ ರಂಗದ ಪ್ರಮುಖರು ಭಾಗವಹಿಸುವರು. ಬಳಿಕ ಮಧ್ಯಾಹ್ನ 1 ಗಂಟೆಯಿಂದ ಕುಟುಂಬಶ್ರೀ ಸಿಡಿಎಸ್, ಬಾಲಸಭಾ, ಪಂ.ಉದ್ಯೋಗಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಹಸಿರು ಕ್ರಿಯಾಸೇನೆ ಕಾರ್ಯಕರ್ತರಿಂದ ದೇಶಭಕ್ತಿಯುತ ಸಾಂಸ್ಕøತಿಕ ವೈವಿಧ್ಯಮಯ ಕಾರ್ಯಕ್ರಮ, ಗೀತಾ ಗಾಯನ ಜರಗಲಿದೆ ಮಧ್ಯಾಹ್ನ 2 ರಿಂದ ಕನಲ್ ನಾಟ್ಟ್ ಕೂಟಂ ಪಾಂಡಿ ಅವರಿಂದ "ಕನಲಾಟ್ಟಂ" ಎಂಬ ದೇಶಭಕ್ತಿ ಹಾಗೂ ಜಾನಪದ ನೃತ್ತ ಗಾಯನ ವಿನೂತನ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
……………………………………………………………………………………………