ಕಾಸರಗೋಡು: ನೆಹರು ಯುವ ಕೇಂದ್ರ ಯೂತ್ ಕ್ಲಬ್ ಅಫಿಲಿಯೇಶನ್ ಅಭಿಯಾನ ನಡೆಸುತ್ತಿದ್ದು, ನೆಹರು ಯುವ ಕೇಂದ್ರದೊಂದಿಗೆ ಈ ಹಿಂದೆ ಸಂಬಂಧ ಹೊಂದಿದ್ದ ಮತ್ತು ವಿವಿಧ ಕಾರಣಗಳಿಂದ ನವೀಕರಿಸಲು ಸಾಧ್ಯವಾಗದ ಯೂತ್ ಕ್ಲಬ್, ಮಹಿಳಾ ಸಮಾಜಗಳಿಗೆ ನವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ಹೊಸ ಸಂಸ್ಥೆಗಳಿಗೆ ನೋಂದಣಿ ಇಲ್ಲದಿದ್ದರೂ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಅಫಿಲಿಯೇಶನ್ ನೀಡಲಾಗುವುದು. ಕಾಸರಗೋಡು, ಕಾಞಂಗಾಡು ಮತ್ತು ಮಂಜೇಶ್ವರಂ ಬ್ಲಾಕ್‍ಗಳ ಕ್ಲಬ್‍ಗಳನ್ನು ಮೊದಲ ಅಭಿಯಾನದಲ್ಲಿ ಒಳಸಲಾಗಿದೆ. ಈ ಬ್ಲಾಕ್‍ಗಳಲ್ಲಿರುವ ಆಸಕ್ತ ಯುವ ಸಂಘಗಳು ಜಿಲ್ಲಾ ಯುವ ಅಧಿಕಾರಿ ಪಿ.ಅಖಿಲ್ 7736426247, ಟಿ.ಎಂ.ಅನ್ನಮ್ಮ 9633939185, ಪಿ.ಸನುಜಾ 81316921959 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ನೆಹರು ಯುವ ಕೇಂದ್ರ ಯೂತ್ ಕ್ಲಬ್ ಅಫಿಲಿಯೇಶನ್ ಅಭಿಯಾನ
0
ಆಗಸ್ಟ್ 01, 2022
Tags