ಪಣಜಿ: ಸೋನಾಲಿ ಫೋಗಾಟ್ ಸಾವಿನ ಪ್ರಕರಣದಲ್ಲಿ ಇಲ್ಲಿಯವರೆಗೆ ಕೈಗೊಂಡ ಕ್ರಮಗಳ ವರದಿಯನ್ನು (ಎಟಿಆರ್) ಹರಿಯಾಣ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸೋಮವಾರ ತಿಳಿಸಿದರು.
'ವರದಿಯನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಮತ್ತು ಅಲ್ಲಿನ ಡಿಜಿಪಿ ಅವರಿಗೆ ಸಲ್ಲಿಸಲಾಗುವುದು.
ಹರಿಯಾಣ ಮುಖ್ಯಮಂತ್ರಿ ನನ್ನ ಬಳಿ ಮಾತನಾಡಿದ್ದು, ಪ್ರಕರಣದ ವಿಸ್ತೃತ ತನಿಖೆ ನಡೆಸುವಂತೆ ಕೋರಿದ್ದಾರೆ' ಎಂದು ಅವರು ಹೇಳಿದರು.
'ಪ್ರಕರಣದ ತನಿಖೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಗೋವಾ ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ' ಎಂದರು. ಅಗತ್ಯ ಬಿದ್ದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವುದಾಗಿ ಗೋವಾ ಸರ್ಕಾರವು ಭಾನುವಾರ ಹೇಳಿತ್ತು.