ಮಾಜಿ ಸಚಿವೆ ಕೆ.ಕೆ.ಶೈಲಜಾ ವಿಧಾನಸಭೆಯಲ್ಲಿ ಪ್ರದರ್ಶಿಸಿದ ವಿವಾದಿತ ಸವಗತವನ್ನು ದಿಕ್ಕು ತಪ್ಪಿಸುವ ರೀತಿಯಲ್ಲಿ ಪ್ರಚಾರ ಮಾಡುತ್ತಿರುವುದು ವಿಷಾದನೀಯ ಎಂದು ಸ್ವತಃ ಶೈಲಜಾ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಶೈಲಜಾ ಫೇಸ್ ಬುಕ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಲೋಕಾಯುಕ್ತ (ತಿದ್ದುಪಡಿ) ಮಸೂದೆಯನ್ನು ವಿಧಾನಸಭೆಯಲ್ಲಿ ವಿಷಯ ಸಮಿತಿಗೆ ಕಳುಹಿಸುವ ಪ್ರಸ್ತಾವನೆಯನ್ನು ಅವರೇ ಮಂಡಿಸಿದರು. ಭಾಷಣದ ವೇಳೆ ಕೆ.ಟಿ.ಜಲೀಲ್ ಪ್ರಶ್ನೆ ಎತ್ತಿದರು. ಆಸನದ ಮೇಲೆ ಕುಳಿತು ಭಾಷಣ ಮಾಡುವ ಸಮಯ ಕಳೆದು ಕೊಳ್ಳುತ್ತದೆ ಎಂದು ಭಾವಿಸಿ ಸಜಿ ಚೆರಿಯನ್ ಅವರಿಗೆ ಆತ್ಮೀಯರಾಗಿದ್ದ ತನ್ನ ಮಾತುಗಳನ್ನು ದಾರಿತಪ್ಪಿಸುವ ರೀತಿಯಲ್ಲಿ ಪ್ರಸಾರ ಮಾಡುತ್ತಿರುವುದು ವಿμÁದನೀಯ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಜಲೀಲ್ ವಿರುದ್ಧ ಮಾಡಿರುವ ಆರೋಪ ನಿರಾಧಾರ ಹಾಗೂ ದುರುದ್ದೇಶದಿಂದ ಕೂಡಿದೆ ಎಂಬುದು ಕೆ.ಕೆ.ಶೈಲಜಾ ಅವರು ವಿವರಿಸಿರುವರು. ಲೋಕಾಯುಕ್ತ (ತಿದ್ದುಪಡಿ) ಮಸೂದೆ ಕುರಿತು ವಿಧಾನಸಭೆಯಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಶೈಲಜಾ ಅವರ ಈ ವಿಷಯ ಬಹಿರಂಗವಾಗಿದೆ. ಕೆ.ಟಿ.ಜಲೀಲ್ ಭಾಷಣ ಮಾಡಲು ಎದ್ದು ನಿಂತಾಗ ಈ ಚೆರಿಯನ್ ಅವರಲ್ಲಿ ಸ್ವಗತದ ರೀತಿ ಶೈಲಜಾ ಹೇಳಿದ್ದರು.
ಈ ವ್ಯಕ್ತಿ ಇನ್ನೇನು ಹೇಳುತ್ತಾರೋ ’ ಎಂದು ಕೆ.ಕೆ.ಶೈಲಜಾ ಹೇಳಿದ್ದರು. ಆಗ ಮೈಕ್ ಆನ್ ಆಗಿದ್ದನ್ನು ನೆನಪಿಸಿಕೊಳ್ಳದೆ ಮಾಜಿ ಸಚಿವರು ಹೀಗೆ ಹೇಳಿದರು. ಕೆ.ಟಿ.ಜಲೀಲ್ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ವಿವಾದಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ. ಜಲೀಲ್ ಆಜಾದ್ ಕಾಶ್ಮೀರವನ್ನು ಬಳಸಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ಅದಕ್ಕಾಗಿ ಜಲೀಲ್ ವಿರುದ್ಧ ಪ್ರಕರಣ ದಾಖಲಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕೆ.ಕೆ.ಶೈಲಜಾ ಅವರ ಪ್ರತಿಕ್ರಿಯೆ ಎಂಬುದು ಗಮನಾರ್ಹ. ಸಿಪಿಎಂನಲ್ಲೇ ಕೆ.ಟಿ.ಜಲೀಲ್ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದೆ ಎಂದು ಮಾಜಿ ಸಚಿವರ ಸ್ವಗತದಿಂದ ಬಯಲಾಗಿದೆ. ಈ ಮಧ್ಯೆ ತನ್ನ ಮಾತು ವಿವಾದವಾಗುವುದು ಬೇಡವೆಂಬ ರೀತಿಯಲ್ಲಿ ಇದೀಗ ಪ್ರತಿಕ್ರಿಯೆ ನೀಡಿದಂತಿದೆ.
ಕೆ.ಕೆ.ಶೈಲಜಾರ ಸ್ವಗತ ಹೇಳಿಕೆ ಬಹಿರಂಗ ಘಟನೆ: ಜಲೀಲ್ ವಿರುದ್ಧ ಅಲ್ಲ, ದಾರಿ ತಪ್ಪಿಸುವ ರೀತಿಯಲ್ಲಿ ಬಿತ್ತರಿಸುತ್ತಿರುವುದು ವಿಷಾದನೀಯ: ಪ್ರತಿಕ್ರಿಯೆ ನೀಡಿದ ಕೆ.ಕೆ.ಶೈಲಜಾ
0
ಆಗಸ್ಟ್ 23, 2022