ಕುಂಬಳೆ: ಬಾಕುಡ ಸಮುದಾಯ ಸಮಾಜ ರಾಜಕೀಯೇತರ ಸಂಘಟನೆಯಾಗಿದ್ದು, ಸಮಾಜಕ್ಕೆ ಅವಮಾನ ಮಾಡಿದವರು ಕ್ಷಮೆ ಯಾಚಿಸಬೇಕು ಎಂದು ಪದಾಧಿಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆ.7ರಂದು ಎಸ್ ಎಸ್ .ಎಲ್.ಸಿ, ಪ್ಲಸ್ ಟು ಹಾಗೂ ಪದವಿ ವಿಜೇತ ಸಮುದಾಯದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಸನ್ಮಾನಿಸಲು ಕಾರ್ಯಕ್ರಮವನ್ನು ಸ್ಥಳೀಯ ಶಾಸಕರನ್ನು ಪಾಳ್ಗೊಸಿ ಹಮ್ಮಿಕೊಳ್ಳಲಾಗಿತ್ತು. ಈ ಉದ್ದೇಶಕ್ಕಾಗಿ ಅಗ್ಗದ ಬಾಡಿಗೆಗೆ ಲಭಿಸಿದ ಸಭಾಂಗಣವನ್ನು ಆಯ್ಕೆಮಾಡಲಾಗಿತ್ತು. ಇದನ್ನೇ ಬಳಸಿ ರಾಜಕೀಯ ಉದ್ದೇಶಗಳಿಂದ ಶಾಸಕರನ್ನು ನಿಂದಿಸಲು ಬಾಕುಡ ಸಮಾಜವು ವಿಎಚ್‍ಪಿ ಮತ್ತು ಆರ್‍ಎಸ್‍ಎಸ್ ನ ಅಧೀನ ಸಂಘಟನೆಯೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೊಳ್ಳು ಪ್ರಚಾರ ನಡೆಸಲಾಗಿದೆ ಎಂದು ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ನಾವು ಶಾಸಕರೊಂದಿಗೆ ಬೆಂಬಲವಾಗಿದ್ದೇವೆ, ದಲಿತರ ಹೆಸರಲ್ಲಿ ಕಪಟ ನಾಟಕವಾಡುವ ಪ್ರಚಾರದ ನೇತೃತ್ವ ವಹಿಸಿದ ಎಸ್‍ಡಿಪಿಐ ಕ್ಷಮೆಯಾಚಿಸಬೇಕು ಎಂದು ಪದಾಧಿಕಾರಿಗಳು ಒತ್ತಾಯಿಸಿದರು.
ಇಂತಹ ನಾಚಿಕೆಗೇಡಿನ ಕೃತ್ಯದಿಂದ ಮಂಜೇಶ್ವರದ ಜಾತ್ಯಾತೀತತೆಗೆ ಮಸಿ ಬಳಿಯಬಾರದು ಎಂದು ಮುಖಂಡರು ವಿನಂತಿಸಿದ್ದಾರೆ.
ಅನೇಕರು ಈ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಮತ್ತು ಮಲಯಾಳಂ ವಾಹಿನಿಯೊಂದು ಸುಳ್ಳು ಸುದ್ದಿ ನೀಡಿದೆ ಎಂದು ಮುಖಂಡರು ಆರೋಪಿಸಿದ್ದಾರೆ. ಅಪಪ್ರಚಾರ ಮಾಡುವವರ ವಿರುದ್ಧ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದ್ದು, ಕ್ಷಮೆ ಯಾಚಿಸದಿದ್ದರೆ ಎಲ್ಲ ದಲಿತ ಸಂಘಟನೆಗಳನ್ನು ಸಂಘಟಿಸಿ ಪ್ರಬಲ ಆಂದೋಲನ ನಡೆಸುವುದಾಗಿ ಮುಖಂಡರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುರೇಶ್ ಕುಮಾರ್ ಮಂಗಲ್ಪಾಡಿ, ಉದಯ ಬೆದ್ರಡ್ಕ, ಸತೀಶ್ ಮಂಗಲ್ಪಾಡಿ, ಶಿವ ಉಪಸ್ಥಿತರಿದ್ದರು.
ಬಾಕುಡ ಸಮುದಾಯ ಸೊಸೈಟಿ ಸ್ವತಂತ್ರ ಸಂಸ್ಥೆಯಾಗಿದೆ; ಅವಮಾನ ಮಾಡಿದವರು ಕ್ಷಮೆ ಕೇಳಬೇಕು'
0
ಆಗಸ್ಟ್ 12, 2022
Tags