ಕಾಸರಗೋಡು: ಕೇರಳ ರಸ್ತೆ ಸಾರಿಗೆ ನಿಗಮ(ಕೆಎಸ್ಸಾರ್ಟಸಿ)ದ ತುಳುನಾಡ್ ಶಾಪಿಂಗ್ ಕಾಂಪ್ಲೆಕ್ಸ್‍ನಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ಸರ್ಕಾರದ ಅಧೀನ ಸಂಸ್ಥೆಯಾದ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಹ್ಯಾನ್‍ವೀವ್ ಶೋರೂಂನಲ್ಲಿ ಓಣಂ ಹಬ್ಬದ ದರ ಕಡಿತ ಮಾರಾಟದ ವಸ್ತ್ರ ಮೇಳ "ಓಣೋತ್ಸವಂ 2022" ಆರಂಭಗೊಂಡಿದೆ. ಸೆ.7ರವರೆಗೆ ನಡೆಯುವ ಮೇಳದಲ್ಲಿ ಶೇ.20ರಷ್ಟು ರಿಯಾಯಿತಿ ಜತೆಗೆ ಎಲ್ಲ ಬಗೆಯ ಕೈಮಗ್ಗ ವಸ್ತ್ರಗಳ ಮೇಲೆ ಶೇ.10ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು. ಜತೆಗೆ ಸರ್ಕಾರಿ ಸಂಬಂಧಿತ ನೌಕರರು ಕಂತಿನ ಆಧಾರದಲ್ಲಿ ಬಟ್ಟೆ ಖರೀದಿಸುವ ಸೌಲಭ್ಯ ಕಲ್ಪಿಸಲಾಗಿದೆ. ದರಕಡಿತ ಮಾರಾಟ ಸಂದರ್ಭ ರೂ.15ಸಾವಿರಕ್ಕಿಂತ ಹೆಚ್ಚಿನ ಬಟ್ಟೆ ಖರೀದಿಸುವವರಿಗೆ ರೂ.25 ಕೋಟಿಗಳ ಮೊದಲ ಬಹುಮಾನ ಹೊಂದಿರುವ ಕೇರಳ ಸರ್ಕಾರದ ಓಣಂ ಬಂಪರ್ ಲಾಟರಿಯ ಒಂದು ಟಿಕೆಟನ್ನು ಉಡುಗೊರೆಯಾಗಿ ನೀಡಲಾಗುವುದು ಎಂದೂ ಪ್ರಕಟಣೆ ತಿಳಿಸಿದೆ.
ಓಣೋತ್ಸವ-ಕೈಮಗ್ಗ ಬಟ್ಟೆಯ ದರಕಡಿತ ಮಾರಾಟ, ಲಾಟರಿ ಟಿಕೆಟ್ ಆಫರ್
0
ಆಗಸ್ಟ್ 24, 2022
Tags