ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ದ್ವಿತೀಯ ಚಾತುರ್ಮಾಸ್ಯದ ಅಂಗವಾಗಿ ಶ್ರೀಮಠದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಇಂದು(ಆ.12) ಸಂಜೆ 6 ರಿಂದ ಖ್ಯಾತ ಗಾಯಕ ಹುಸೇನ್ ಸಾಬ್ ಕನಕಗಿರಿ ಅವರಿಂದ ದಾಸ ಸಂಕೀರ್ತನೆ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬುಧವಾರ ಸಂಜೆ ಗಾಯಕರಾದ ಕಿಶೋರ್ ಪೆರ್ಲ ಹಾಗೂ ಅರವಿಂದ ಆಚಾರ್ಯ ಮಾಣಿಲ ಅವರಿದ ಭಕ್ತಿ-ಭಾವ ಲಹರಿ ಪ್ರಸ್ತುತಿಗೊಂಡಿತು. ಸತ್ಯನಾರಾಯಣ ಐಲ(ಹಾರ್ಮೋನಿಯಂ), ಅಶ್ವಿನ್ ಪುತ್ತೂರು(ಕೀಬೋರ್ಡ್), ಗಿರೀಶ್ ಪೆರ್ಲ ಹಾಗೂ ಲವಕುಮಾರ ಐಲ(ತಬಲಾ), ಸಚಿನ್ ಪುತ್ತೂರು(ರಿದಂಪ್ಯಾಡ್)ಪಕ್ಕವಾದ್ಯದಲ್ಲಿ ಸಾಥ್ ನೀಡಿದರು. ಗುರುವಾರ ರಾತ್ರಿ ಪುತ್ತೂರಿನ ನೃತ್ಯೋಪಾಸನಾ ಕಲಾಕೇಂದ್ರದ ವಿದುಷಿಃ ಶಾಲಿನಿ ಆತ್ಮಭೂಷಣ್ ನಿರ್ದೇಶನದಲ್ಲಿ ನೃತ್ಯೋಹಂ ನಾಟ್ಯ ಪ್ರದರ್ಶನ ನಡೆಯಿತು.
ಎಡನೀರಲ್ಲಿ ಇಂದು ಹುಸೇನ್ ಸಾಬ್ ರಿಂದ ದಾಸ ಸಂಕೀರ್ತನೆ
0
ಆಗಸ್ಟ್ 12, 2022