ತಿರುವನಂತಪುರ: ತ್ರಿವಳಿ ತಲಾಖ್ ಕಾನೂನನ್ನು ಸುಪ್ರೀಂ ಕೋರ್ಟ್ ನಿಷೇಧಿಸುವುದರೊಂದಿಗೆ ಮುಸ್ಲಿಂ ಮಹಿಳೆಯರಿಗೆ ಸಂಕಷ್ಟದ ಸಮಯ ಪ್ರಾರಂಭವಾಯಿತು ಎಂದು ಲೀಗ್ ಮುಖಂಡ ಓ.ಅಬ್ದುಲ್ಲಾ ಹೇಳಿದರು. ಈ ಕಾನೂನು ಏನು ಎಂದು ಸರ್ಕಾರ ಮತ್ತು ಜನರಿಗೆ ನಿಜವಾಗಿಯೂ ಅರ್ಥವಾಗಿಲ್ಲ ಎಂದಿರುವರು.
ತ್ರಿವಳಿ ತಲಾಖ್ ಕುರಿತು ಮುಸ್ಲಿಂ ಸಮುದಾಯ ಮತ್ತು ಇತರ ಸಮುದಾಯಗಳ ಜನರೊಂದಿಗೆ ಮಾತನಾಡಿದಾಗ, ವ್ಯತಿರಿಕ್ತ ಪ್ರತಿಕ್ರಿಯೆಗಳನ್ನು ಪಡೆದಿರುವೆ. ತ್ರಿವಳಿ ತಲಾಖ್ ಎಂದರೇನು ಎಂದು ಯಾರಿಗೂ ತಿಳಿದಿಲ್ಲ ಎಂದು ಓ'ಅಬ್ದುಲ್ಲಾ ಸೂಚಿಸಿದ್ದಾರೆ.
ಇಸ್ಲಾಮಿಕ್ ಕಾನೂನಿನ ಪ್ರಕಾರ, ಮುಸ್ಲಿಂ ಸಮುದಾಯದಲ್ಲಿ ಹಲವಾರು ಹಂತಗಳ ನಂತರ ತ್ರಿವಳಿ ತಲಾಖ್ ಅನ್ನು ಉಚ್ಚರಿಸಲಾಗುತ್ತದೆ. ವೈವಾಹಿಕ ಜೀವನದಲ್ಲಿ ಒಟ್ಟಿಗೆ ಮುಂದುವರಿಯಲು ಸಾಧ್ಯವಾಗದ ಸಂದರ್ಭಗಳಲ್ಲಿ ತಲಾಖ್ ಅನ್ನು ಉಚ್ಚರಿಸಬಹುದು. ಆದರೆ ಹೆಂಗಸರಿಗೆ ಗಂಡನ ಮನೆಯಲ್ಲಿ ವಸತಿ ಕಲ್ಪಿಸಿ ಊಟ, ಬಟ್ಟೆ ಕೊಡಬೇಕು. ಈ ಸಮಯದಲ್ಲಿ ಹೆಂಡತಿಯೊಂದಿಗೆ ದೈಹಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಿಲ್ಲ. ಇನ್ನೂ ಸಮಸ್ಯೆಗಳಿದ್ದರೆ ಮತ್ತೊಮ್ಮೆ ತಲಾಖ್ ಹೇಳಬಹುದು. ಇಸ್ಲಾಂನಲ್ಲಿ ತ್ರಿವಳಿ ತಲಾಖ್ ಎಂದರೆ ವೈವಾಹಿಕ ಸಂಬಂಧವನ್ನು ಮುಂದುವರಿಸಲು ಸಾಧ್ಯವಾಗದ ಕಾರಣ ಮೂರು ಕಂತುಗಳಲ್ಲಿ ತಲಾಖ್ ಮೂಲಕ ಸಂಬಂಧವನ್ನು ಬೇರ್ಪಡಿಸುವುದು ಎಂದು ಅವರು ವಿವರಿಸಿದರು.
ಇಸ್ಲಾಮಿಕ್ ಕಾನೂನಿನಡಿಯಲ್ಲಿ ತ್ರಿವಳಿ ತಲಾಖ್ ಅನ್ನು ಈ ರೀತಿ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೂಲಕ ಈ ಕಾನೂನನ್ನು ನಿμÉೀಧಿಸಲು ಸಿದ್ಧವಾಗಿದೆ, ಮಹಿಳೆಯರು ಮಾತ್ರ ಇದರಿಂದ ಇಕ್ಕಟ್ಟಿಗೆ ಸಿಲುಕುವರು. ಪುರುಷರು ಮರುಮದುವೆಯಾಗುತ್ತಾರೆ ಮತ್ತು ಕುಟುಂಬ ಜೀವನವನ್ನು ಆನಂದಿಸುತ್ತಾರೆ. ಮಹಿಳೆಯರ ಸಮಸ್ಯೆ ಸ್ವಾಹಾ ಆಗಿಬಿಟ್ಟಿದೆ. ತ್ರಿವಳಿ ತಲಾಖ್
ಕಾನೂನನ್ನು ಮರುಸ್ಥಾಪಿಸಿದರೆ ಮಾತ್ರ ಮಹಿಳೆಯರು ಸುರಕ್ಷಿತವಾಗಿರುತ್ತಾರೆ ಎಂದು ಓ ಅಬ್ದುಲ್ಲಾ ಹೇಳುತ್ತಾರೆ.