ಉಪ್ಪಳ :ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ನಿವಸಿಯೊಬ್ಬನನ್ನು ಪೊಲೀಸರು ವಶಕ್ಕೆ ತೆಗೆಉಕೊಂಡಿರುವುದಾಗಿ ಮಾಹಿತಿಯಿದೆ. ಮೂಲ ಕರ್ನಾಟಕ ನಿವಾಸಿಯಾಗಿರುವ ಈತ ಉಪ್ಪಳ ಸೋಂಕಾಲ್ ಸನಿಹದ ಕೊಡಂಗೆ ಎಂಬಲ್ಲಿ ವಾಸಿಸುತ್ತಿದ್ದಾನೆ.ಕೂಲಿ ಕಾರ್ಮಿಕನಾಗಿರುವ ಈತ ಕೊಲೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ್ದಾನೆನ್ನಲಾಗಿದೆ. ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದವರಿಗೆ ಈತ ಆಶ್ರಯ ನೀಡಿದ್ದಾಗಿ ಮಾಹಿತಿಯಿದ್ದು, ಈತನನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಲಾಗುತ್ತಿದೆ. ಕೊಲೆ ಪ್ರಕರಣದ ಪ್ರಮುಖ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ.
ಪ್ರವೀಣ್ ಕೊಲೆ: ಆರೋಪಿಗಳಿಗೆ ಆಶ್ರಯ ನೀಡಿದ ಉಪ್ಪಳ ನಿವಾಸಿ ವಶಕ್ಕೆ?
0
ಆಗಸ್ಟ್ 04, 2022