ಬದಿಯಡ್ಕ: ಸೀತಾಂಗೋಳಿ ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಲಾಯಿತು.
ಅಧ್ಯಕ್ಷ ವಕೀಲ ಥೋಮಸ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಡಾ.ಪ್ರಸಾದ್ ಸೀತಾಂಗೋಳಿ ಉಪಸ್ಥಿತರಿದ್ದರು. ಧ್ವಜಾರೋಹಣಗೈದ ನಿವೃತ್ತ ಸೈನಿಕ ರವೀಂದ್ರನಾಥ ಭಟ್ ಬೇಳ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ. ಮತ್ತು ಪ್ಲಸ್‍ಟು ತರಗತಿಗಳಲ್ಲಿ ಎಲ್ಲಾ ವಿಷಯಗಳಲ್ಲಿಯೂ ಎಪ್ಲಸ್ ಪಡೆದ ಮಕ್ಕಳನ್ನು ಸನ್ಮಾನಿಸಲಾಯಿತು. ಸದಸ್ಯ ಕೆ.ಎಂ.ಪಾಟಾಳಿ ಸ್ವಾಗತಿಸಿ, ಆಟ್ರ್ಸ್ ಕಾರ್ಯದರ್ಶಿ ಅಪ್ಪಣ್ಣ ಸೀತಾಂಗೋಳಿ ವಂದಿಸಿದರು.
ಸಂತೋಷ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ನಿಂದ ಸ್ವಾತಂತ್ರ್ಯ ದಿನಾಚರಣೆ
0
ಆಗಸ್ಟ್ 18, 2022
Tags